ಮಾರ್ಚ್ 21, ಇಂದು
ವಿಶ್ವ ಕವನ ದಿನ
ಆದರೆ ಈ ಸಂತಸ,
ನನಗಂತೂ ಪ್ರತಿದಿನ
ಒಂದು ದಿನವೂ ನೀ
ನನಗೆ ಕಾಣದೇ, ಮಾತಾಡದೇ
ಬರಿ ಕನಸಲ್ಲಿಯೇ ಬಂದು,
ಪ್ರತಿ ಇರುಳು ಹೂನಗೆ ಚೆಲ್ಲಿ
ನಿನ್ನ ಪ್ರೀತಿಯ ಅದ್ಬುತ ಶಕ್ತಿಯಿಂದ
ಅದೆಂತಹ ಮೋಡಿ ಮಾಡಿರುವೆ,
ನನಗೆ ನೀ, ಅದ್ಹೇಗೋ
ನನ್ನ ಮನದ ರಾಣಿಯಾಗಿಬಿಟ್ಟೆ.
ಯಾವ ಸುಂದರಿಯರ
ಚೆಲುವು ಸಾಟಿಯಿಲ್ಲ ನಿನಗೆ,
ನಿನ್ನ ಮೋಹಕ ನಗುವಿನ
ಕನಸುಗಳು ಇಷ್ಟ ಕಣೇ ನನಗೆ.
ನಿನ್ನ ಬರುವಿಕೆಗಾಗಿ
ಹಂಬಲಿಸುತಿದೆ ಮನ ಹಾಗೇ...
ನನ್ನೊಳಗಿನ ಮದನ
ಕಾದಿರುವನು ಚೆಲುವೆ
ನಮ್ಮಿಬ್ಬರ ಸಮಾಗಮಕ್ಕಾಗಿ..
ಚೆಲುವೇ.. ಇನ್ನೂ ಕಾಯಿಸಬೇಡ,
ಕಾಡಿಸಬೇಡ, ಸತಾಯಿಸಬೇಡ..
ಈ ಪ್ರೇಮ ವಿರಹವನು
ನಾ ತಾಳಲಾರೆ... ನನ್ನೊಲವೇ..!!!