Sunday, March 20, 2011

ಕವಿಯೊಬ್ಬನ ಪ್ರಲಾಪ..!!


ಮಾರ್ಚ್ 21, ಇಂದು
ವಿಶ್ವ ಕವನ ದಿನ
ಆದರೆ ಈ ಸಂತಸ,
ನನಗಂತೂ ಪ್ರತಿದಿನ

ಒಂದು ದಿನವೂ ನೀ
ನನಗೆ ಕಾಣದೇ, ಮಾತಾಡದೇ
ಬರಿ ಕನಸಲ್ಲಿಯೇ ಬಂದು,
ಪ್ರತಿ ಇರುಳು ಹೂನಗೆ ಚೆಲ್ಲಿ
ನಿನ್ನ ಪ್ರೀತಿಯ ಅದ್ಬುತ ಶಕ್ತಿಯಿಂದ
ಅದೆಂತಹ ಮೋಡಿ ಮಾಡಿರುವೆ,
ನನಗೆ ನೀ, ಅದ್ಹೇಗೋ
ನನ್ನ ಮನದ ರಾಣಿಯಾಗಿಬಿಟ್ಟೆ.

ಯಾವ ಸುಂದರಿಯರ
ಚೆಲುವು ಸಾಟಿಯಿಲ್ಲ ನಿನಗೆ,
ನಿನ್ನ ಮೋಹಕ ನಗುವಿನ
ಕನಸುಗಳು ಇಷ್ಟ ಕಣೇ ನನಗೆ.
ನಿನ್ನ ಬರುವಿಕೆಗಾಗಿ
ಹಂಬಲಿಸುತಿದೆ ಮನ ಹಾಗೇ...

ನನ್ನೊಳಗಿನ ಮದನ
ಕಾದಿರುವನು ಚೆಲುವೆ
ನಮ್ಮಿಬ್ಬರ ಸಮಾಗಮಕ್ಕಾಗಿ..
ಚೆಲುವೇ.. ಇನ್ನೂ ಕಾಯಿಸಬೇಡ,
ಕಾಡಿಸಬೇಡ, ಸತಾಯಿಸಬೇಡ..
ಈ ಪ್ರೇಮ ವಿರಹವನು
ನಾ ತಾಳಲಾರೆ... ನನ್ನೊಲವೇ..!!!

Wednesday, March 16, 2011

ಮೌನಗೀತೆ..!!!

ಯಾರ ಹಳಿಯಲಿ
ಗೆಳತಿ ನಾನು..
ತವರು ಮನೆಯನ್ನೋ,
ಗಂಡನನ್ನೋ, ವಿಧಿಯನ್ನೋ..!!
.
.
ಮದುವೆ ಮಾಡಬೇಕು
ಎನ್ನೋ ಆತುರದಲಿ ನಡೆದ
ಸಣ್ಣತಪ್ಪಿಗೆ, ಮಗಳ ಬಾಳು
ಹೀಗಾಯ್ತಲ್ಲವೆನ್ನೊ ಹೆತ್ತವರ ಕೊರಗು.
ಗಂಡನ ಪ್ರೀತಿ ಮಾಯವಾಯ್ತು,
ಮಾನಸಿಕ ಹಿಂಸೆ ಶುರುವಾಯ್ತು.
.
.
ಯಾರೊಂದಿಗೂ
ಹೇಳಿಕೊಳ್ಳಲಾಗುವುದು
ನನ್ನೆದೆಯ ಈ ದುಗುಡ.
ದಿನ ರಾತ್ರಿ.. ನನ್ನ ಕಣ್ಗಳು
ಹನಿಯುವುದರ ಮೂಲಕ
ಮೌನಗೀತೆಯನ್ನು ಹಾಡುತಿದೆ,
ಮನಕೆ ಸಮಾಧಾನ ಮಾಡುತಿದೆ.
.
.
ನನಗೆ ಗೊತ್ತು ಬಿಡು,
ಇದು ನನ್ನೊಬ್ಬಳದ್ದೇ ನೋವಲ್ಲ.
ನನ್ನಂತೆಯೇ ಸಾವಿರಾರು
ಹೆಣ್ಣು ಹೃದಯಗಳು
ತಮ್ಮ ಕಣ್ಗಳೊಂದಿಗೆ
ಮೌನಗೀತೆ ಹಾಡುತಿವೆ.

ಹಸಿವು

ಯಾವ ದೇವರಿಗೂ
ಕೂಡ ಕರುಣೆ ಎಂಬುದೇ ಇಲ್ಲ.
"ಹುಟ್ಟಿಸಿದ ದೇವರು,
ಹುಲ್ಲು ತಿನ್ನಿಸುವುದಿಲ್ಲ'"
ಎನ್ನುವುದೆಲ್ಲವೂ ಬರೀ ಸುಳ್ಳು..!!


ಉಡಲು ಬಟ್ಟೆ ಇಲ್ಲ,
ತಿನ್ನಲು ಊಟವಿಲ್ಲ,
ಶಾಲೆಯಿಲ್ಲ, ಮನೆಯಿಲ್ಲ,
ಕೆಲಸವಿಲ್ಲ, ಆರ್ಥಿಕ ಲಾಭವಿಲ್ಲ,
ಯಾವ ಜನುಮದ
ಪಾಪವೇನೋ ಇವರದು..!!

ಪಿಜ್ಜಾ-ಬರ್ಗರ್ ಅಂತಾ,
ಇನ್ನೇನ್ನೇನೋ ಅದು-ಇದು ಎಂದು,
ಸಾವಿರಾರು ಖರ್ಚು ಮಾಡುವ
ನಾವುಗಳು, ಇವರನು ಕಂಡಾಗ
ಹಿಡಿ ಅನ್ನವಾದರೂ ಹಾಕೋಣ.,
ಬಿಡಿಗಾಸಾದರೂ ನೀಡೋಣ.


ಮಾನವತೆಯ ಮೆರೆಯೋಣ..
ಗೆಳೆಯರೇ ಮಾನವತೆಯ ಮೆರೆಯೋಣ..