Wednesday, March 16, 2011

ಮೌನಗೀತೆ..!!!

ಯಾರ ಹಳಿಯಲಿ
ಗೆಳತಿ ನಾನು..
ತವರು ಮನೆಯನ್ನೋ,
ಗಂಡನನ್ನೋ, ವಿಧಿಯನ್ನೋ..!!
.
.
ಮದುವೆ ಮಾಡಬೇಕು
ಎನ್ನೋ ಆತುರದಲಿ ನಡೆದ
ಸಣ್ಣತಪ್ಪಿಗೆ, ಮಗಳ ಬಾಳು
ಹೀಗಾಯ್ತಲ್ಲವೆನ್ನೊ ಹೆತ್ತವರ ಕೊರಗು.
ಗಂಡನ ಪ್ರೀತಿ ಮಾಯವಾಯ್ತು,
ಮಾನಸಿಕ ಹಿಂಸೆ ಶುರುವಾಯ್ತು.
.
.
ಯಾರೊಂದಿಗೂ
ಹೇಳಿಕೊಳ್ಳಲಾಗುವುದು
ನನ್ನೆದೆಯ ಈ ದುಗುಡ.
ದಿನ ರಾತ್ರಿ.. ನನ್ನ ಕಣ್ಗಳು
ಹನಿಯುವುದರ ಮೂಲಕ
ಮೌನಗೀತೆಯನ್ನು ಹಾಡುತಿದೆ,
ಮನಕೆ ಸಮಾಧಾನ ಮಾಡುತಿದೆ.
.
.
ನನಗೆ ಗೊತ್ತು ಬಿಡು,
ಇದು ನನ್ನೊಬ್ಬಳದ್ದೇ ನೋವಲ್ಲ.
ನನ್ನಂತೆಯೇ ಸಾವಿರಾರು
ಹೆಣ್ಣು ಹೃದಯಗಳು
ತಮ್ಮ ಕಣ್ಗಳೊಂದಿಗೆ
ಮೌನಗೀತೆ ಹಾಡುತಿವೆ.

1 comment:

  1. ಹೆಣ್ಣಿನ ಮನದ ದುಗುಡಗಳ ದನಿಯಾಗಿ ನಿಂತಿದೆ ಕವಿತೆ.. ಇಂತಹ ಕಷ್ಟಗಳನ್ನನುಭವಿಸುತ್ತಿರುವ ಸಾವಿರಾರು ಹೆಣ್ಣುಮಕ್ಕಳಿದ್ದಾರೆ ನಮ್ಮಗಳ ನಡುವೆ.. ಹೆತ್ತವರ ಆತುರಕ್ಕೆ ತಮ್ಮ ಬಾಳನ್ನೇ ಬಲಿಯಾಗಿ ನೀಡಿ ಯಾರನ್ನೂ ದೂಷಿಸದೆ ತನ್ನ ಹಣೆಬರಹವನ್ನಳಿಯುತ್ತಾ ಕಣ್ಣೀರು ಸುರಿಸುವ ಹೆಣ್ಣುಮಕ್ಕಳ ಸತ್ವಯುತ ಧ್ವನಿಯಾಗಿ ನಿಂತಿದೆ ನಿಮ್ಮ ಕವಿತೆ.. ಮೆಚ್ಚಿದೆ..

    ReplyDelete