ಯಾವುದೋ ಪುಸ್ತಕದ ಮಡಿಲಲ್ಲಿ,
ಹಾಯಾಗಿ ಮಲಗಿದ್ದೆ ನಾನು..
ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,
ನನ್ನ. ಅಬ್ಬಾ..! ದೋಣಿಯಾಗಿದ್ದೆ ನಾನು.
ಮರೆತೆ ನಾನು, ಮಡಿಚಿಟ್ಟ ನೋವನ್ನು
ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು.
ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,
ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು.
ಅವಳ ಕೋಮಲ ಪಾದಗಳು ಕೆಸರಾಯ್ತು,
ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,
ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು..
ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು.
ಈ ಸಂತೋಷದ ಗಳಿಗೆಯ ನಡುವೆ,
ಮುಳುಗುವಂತಾದೆ ನಾ, ತುಸು ಗಾಳಿ ಬೀಸಿ,
ಮಳೆಯು ಮತ್ತೆ ಬರುತ್ತಲ್ಲಿತ್ತು.. ಅವಳು
ಅಳುತ್ತಾ ಹೊರಟೇಹೋದಳು, ಅಮ್ಮ ಕರೆದಳೆಂದು
ಇದೇ ಇರಬೇಕು ಹುಟ್ಟು-ಸಾವು.
ಆ ಮುಗ್ಧ ಹೃದಯಗಳ ಸಂತಸಕೆ,
ಮತ್ತೆ ಮತ್ತೆ ನೆನಪಾಗುವೇ ನಾನು.
ನಾನೇ .. ಅವಳ ಅಪ್ಪ ಮಾಡಿಕೊಟ್ಟ
ನಾವಿಕನಿಲ್ಲದ.. ಕಾಗದದ ದೋಣಿ.