ಯಾವುದೋ ಪುಸ್ತಕದ ಮಡಿಲಲ್ಲಿ,
ಹಾಯಾಗಿ ಮಲಗಿದ್ದೆ ನಾನು..
ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,
ನನ್ನ. ಅಬ್ಬಾ..! ದೋಣಿಯಾಗಿದ್ದೆ ನಾನು.
ಮರೆತೆ ನಾನು, ಮಡಿಚಿಟ್ಟ ನೋವನ್ನು
ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು.
ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,
ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು.
ಅವಳ ಕೋಮಲ ಪಾದಗಳು ಕೆಸರಾಯ್ತು,
ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,
ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು..
ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು.
ಈ ಸಂತೋಷದ ಗಳಿಗೆಯ ನಡುವೆ,
ಮುಳುಗುವಂತಾದೆ ನಾ, ತುಸು ಗಾಳಿ ಬೀಸಿ,
ಮಳೆಯು ಮತ್ತೆ ಬರುತ್ತಲ್ಲಿತ್ತು.. ಅವಳು
ಅಳುತ್ತಾ ಹೊರಟೇಹೋದಳು, ಅಮ್ಮ ಕರೆದಳೆಂದು
ಇದೇ ಇರಬೇಕು ಹುಟ್ಟು-ಸಾವು.
ಆ ಮುಗ್ಧ ಹೃದಯಗಳ ಸಂತಸಕೆ,
ಮತ್ತೆ ಮತ್ತೆ ನೆನಪಾಗುವೇ ನಾನು.
ನಾನೇ .. ಅವಳ ಅಪ್ಪ ಮಾಡಿಕೊಟ್ಟ
ನಾವಿಕನಿಲ್ಲದ.. ಕಾಗದದ ದೋಣಿ.
waah... really nice :))
ReplyDeleteLovely....
ReplyDeletehi very good ಕವನ. ಇದನ್ನ ಓದುತ್ತಾ ಇದ್ರೆ ಹಳೆ ನಮ್ಮ ನೆನಪುಗಳು ಒಂದೊಂದಾಗಿ ಮನಸಲ್ಲಿ ಬಿಚ್ಚಿಕೊಳ್ಳುತ್ತಿರುತ್ತೆ
ReplyDeletethumba chennagidhe,
ReplyDeleteolle concept .
houdhu adhane kale anodhu realy nimali olle yochanegalu idhe namage adhana odhidha mele houdhalva anisathe
ತಾನು ಬದುಕಿರುವ ಕೆಲವು ಕ್ಷಣಗಳ ನಂತರದಲ್ಲೇ.. ತನ್ನ ಸಾವು ಎದುರಿಸುವ ದುಃಖಕ್ಕಿಂತ ಕಾಗದದ ದೋಣಿಗೆ... ಮಕ್ಕಳ ನಲಿವು-ಸಂತೋಷ, ಹಾಗೂ ಮರೆಯಲಾರದ ನೆನಪುಗಳನ್ನು ಕೊಟ್ಟ ಸಂತೋಷವೇ ಹೆಚ್ಚಿರುತ್ತದೆ. ಹಾಗೇ ನಾವು ಕೂಡ ಮತ್ತೊಬ್ಬರ ಸಂಭ್ರಮಕ್ಕೆ, ಸಂತೋಷಕ್ಕೆ ನಾವು ಅಲ್ಪ ಕಾರಣವಾದರೂ ಆಗಬೇಕು. ಆಗಲೇ.. ಬದುಕಿಗೊಂದು ಸಾರ್ಥಕ್ಯ. ಮುಗ್ಧ ಮಗುವಿನ ಮನಸಿನ ಮೂಡುವ ಸಂಭ್ರಮವು ... ಎಂತಾ ಕಲ್ಲುಹೃದಯಗಳನ್ನೂ ಕರಗಿಸುವ ಶಕ್ತಿ ಇದೆ. ಅಂತಹ ಮಗುವಿನ ನಗುವಿನ ಸಂಭ್ರಮದ ಜೊತೆಗೆ ಕಾಗದದ ದೋಣಿಯ ಜೀವನ ಸಾರ್ಥಕ್ಯವನ್ನು ವಿವರಿಸುವ ಒಂದು ಚಿಕ್ಕ ಪ್ರಯತ್ನ ಅಷ್ಟೆ.
ReplyDeleteGood one. . .
ReplyDeletelife is wat we expect alla
we shud accept wat it gives
Thank U Sowmya Bhagawat, Nitin Kanetkar, Nataraju, Padma and Bharati ..
ReplyDeletesuperrrr raghu touch agutthe....mansige
ReplyDelete5*
ReplyDeleteಒಂದು ಅನಿರ್ವಚನೀಯ ಆನಂದ ವ್ಯಥೆ ಹುಟ್ಟು ಹಾಕಿದ ಕವನವಿದು.
ನನ್ನ ಬ್ಲಾಗಿಗೂ ಬನ್ನಿ.
ಮುಗ್ಧ ಎಳೆಯಲ್ಲಿ ಭಾವ ತೀವ್ರತೆಯ ಮಡಿಕೆಗಳ ಬಿಚ್ಚಿ ತೇಲಿಬಿಟ್ಟ ನಿಮ್ಮ ಕವನ ಮುಳುಗಲಿಲ್ಲ ಇನ್ನೂ ಮನದಲ್ಲಿ ತೇಲುತಿದೆ... ಸರಳ ಶುದ್ಧ ಅಲೆಗಳಲ್ಲಿ ನಾನು ಕೂಡ ತೇಲಿ ಬಿದ್ದೆ... ಅಭಿನಂದನೆಗಳು...
ReplyDeleteಮನಮುಟ್ಟುವಂತೆ ಮೂಡಿಬಂದಿದೆ........ ನಾವಿಕನಿಲ್ಲದ .. ಕಾಗದದ ದೋಣಿ.
ReplyDeleteಪುಟವೊಂದು ಎದ್ದು ಕುಳಿತು ಮಾತಡುವಂತಿದೆ ..........ತುಂಬಾ ಚೆನ್ನಾಗಿದೆ ರಾಘವೇಂದ್ರರವರೆ .
ReplyDeleteಮರಿಹಾಕಿದ ಪುಸ್ತಕದಲ್ಲಿ ಬಚ್ಚಿಟ್ಟ ನವಿಲು ಗರಿ, ನಿಮ್ಮ ಕಾಗದದ ದೋಣಿಯಲ್ಲಿ ಸ್ವಚ್ಚ೦ಧವಾಗಿ ವಿಹರಿಸುತ್ತಿದೆ. ಚೆನ್ನಾಗಿದೆ ಸಾಲುಗಳು
ReplyDeleteಮಡಿಚಿಟ್ಟ ಕಾಗದದ ದೋಣಿಯ ಭಾವದಲಿ ತೇಲಿದ ನಿಮಗೆ ಧನ್ಯವಾದಗಳು .. Rudrappa Madagunki
ReplyDeleteತುಂಬಾ ಧನ್ಯವಾದಗಳು .. Bhagirathi Chandrashekar ಅಕ್ಕ
ReplyDeleteಈ ಕವಿತೆಗೆ ... 5* ರೇಟಿಂಗ್ ನೀಡಿದ್ದು ಖುಷಿಯಾಯ್ತು. ನಿಮ್ಮ ಕಾಮೆಂಟಿಗೆ ಧನ್ಯವಾದಗಳು Badarinath Palavalli
ReplyDeleteಖಾಲಿ ಹಾಳೆಯಲ್ಲೂ .. ಮನಸಿನ ತುಮುಲವನ್ನು ಕಾಣುವ ಪ್ರಯತ್ನ..!! Pramod Shetty. ನಿಮ್ಮ ಕಾಮೆಂಟಿಗೆ ಧನ್ಯವಾದಗಳು
ReplyDeleteಧನ್ಯವಾದಗಳು.. Ravi Murnad
ReplyDeleteHey nice, you're blog is very different. Good, I liked the poll and the weather update. Your poems are also good, easily understandable. Good job, keep posting.
ReplyDeletePlease post a sample poem in http://www.kannadalyrics.com. Also provide a link to your blog there. Thanks and best wishes.