Friday, September 10, 2010

ಏನ್.. ಹುಡ್ಗೀರೋ...!!


ಏನ್ ಹುಡ್ಗೀರೋ.. ಇವ್ರು
ಏನ್ ಹುಡ್ಗೀರೋ...!!

ಮೈಮುಚ್ಚದ ಬಟ್ಟೆ ತೊಟ್ಟು,
ಅಂಗಾಂಗಳ ಪ್ರದರ್ಶಿಸಿ,
ಜಗದ ಹಳದಿ ಕಣ್ಗಳಿಗೆ
ಮಿನುಗು ತಾರೆಗಳಾಗಿರುವರು,
ಇವ್ರು ಫ್ಯಾಷನ್ ಹೆಸರಿನಲಿ.

ಉಜ್ವಲ ಭವಿಷ್ಯ,
ಜೇನು ತುಂಬಿದ ತುಟಿ,
ತನ್ನನು ತಾನು ಮರೆತು
ತನು-ಮನವನ್ನೆಲ್ಲಾ,
ಕೊಟ್ಟರು ಪ್ರೀತಿಯ ಹೆಸರಲ್ಲಿ.

ಪ್ರೀತಿಯ ಬಲೆಯಲಿ,
ಎಷ್ಟೋ ಹುಡುಗರ ತಲೆಕೆಡಿಸಿ.
ಅಮಾಯಕತೆಯ ಸೋಗಿನಿಂದ,
ಮುಗ್ದಹೃದಯಗಳ ರಕ್ತ ಹರಿಸಿ.
ಬಿರುಗಾಳಿಯಂತೆ ಬಂದು,
ಕಾಣದಂತೆ ಮಾಯವಾಗುವರು.
ಬರೀ.. ಹೆಣ್ಣೆಂಬ ಹೆಸರಿನಲಿ.

ಇವರ ಫ್ಯಾಷನ್ ವೇಷ,
ಕಂಡ ಮುದ್ದುಕಂದನೂ ಕೂಡ
ಜೊಲ್ಲು ಸುರಿಸುವಂತಾಯ್ತು..!
ಪ್ರತಿದಿನವೂ ಇವರು,
ಶೋಷಣೆಗೆ ಒಳಗಾಗುವರು
ಕಾಮಬಯಕೆಯ ಹೆಸರಿನಲಿ.

ಹುಡ್ಗೀರೇ.. ಕಾಪಾಡಿ,
ಹೆಣ್ತನದ ಗೌರವವನ್ನು,
ಸೃಷ್ಟಿಯ ಮೂಲವನ್ನು...!
ಕಿತ್ತೂರು ರಾಣಿ ಚೆನ್ನಮ್ಮ,
ಝಾನ್ಸಿರಾಣಿ ಲಕ್ಷ್ಮಿಬಾಯಿಯರಂತೆ
ಬಾಳಿ.. ಈ ದೇಶದ ಮಣ್ಣಲಿ.

ಕಣ್ ಹನಿ


ಮರೆಯಾದೆಯಾ ಚೆಲುವೇ,
ನನ್ನ ಮರೆತು ನೀ ಮರೆಯಾದೆಯಾ?

ಪ್ರತಿರಾತ್ರಿಯ ತಂಪಿನಲಿ,
ಹುಣ್ಣಿಮೆಯ ಬೆಳದಿಂಗಳಿನಲಿ,
ನಾ ಹೆಣೆದುಕೊಟ್ಟಿದ್ದ
ಸಾವಿರ ಕನಸುಗಳನು ಕದ್ದು
ಮರೆಯಾದೆಯಾ ಚೆಲುವೆ.

ನನ್ನೆದೆಯ ಕನಸುಗಳಲಿ,
ನೀನಿರದ ರಾತ್ರಿಯಲಿ,
ಚಂದಿರನೇ ಸುಡುವಂತಾಯ್ತು..!
ನನ್ನ ಪ್ರೇಯಸಿ ನೀನು,
ಅದು ಹೇಗೆ ಹಚ್ಚಿದೆ,
ಈ ಹೃದಯದಲಿ ಆರದಾ ಬೆಂಕಿ.

ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ.
ನೀ ಮರೆತುಹೋದೆ,
ಎಂಬ ಬೇಸರವೂ ನನಗಿಲ್ಲ.
ಆದರೂ ಗೊತ್ತಿಲ್ಲ ಕಣೇ,
ಎದೆಯಲ್ಲಿ ಕರಗದ ನೋವೊಂದು
ಕಾಡುತಿದೆ, ಈ ಮನಕೆ
ನೀ ಮಾಡಿದ ಗಾಯದಿಂದ.

ನನ್ನನು ನೆನೆದು ನಿನ್ನ
ಕಣ್ಗಳಲಿ ಜಿನುಗುವ
ಒಂದೇ ಒಂದು "ಕಣ್ ಹನಿ"
ಸಾಕು ಕಣೇ... ನನಗೆ.
ನಿನ್ನ ಹೃದಯದಲಿ
ನನ್ನ ಅನಂತ ಪ್ರೀತಿ..
ಇನ್ನೂ ಜೀವಂತವಾಗಿದೆ,
ಎಂಬ ತೃಪ್ತಿ ನನಗೆ.

ಮಹಾರಸಿಕ


ಹೇ ಹುಡುಗಾ..
ನನ್ನೆದೆ ಪ್ರೀತಿಯ ಸಿರಿಯ
ಕೊಳ್ಳೆಹೊಡೆದ ನೀ
ರಸಿಕ ಮಹಾಶಯ ಕಣೋ...

ನಿನ್ನೆದುರು ನಿಂತಾಗ,
ಎಂಥದ್ದೋ ಮುಜುಗರ.
ಆದರೂ ಗೊತ್ತಿಲ್ಲ, ಕಾಡಿದೆ
ಮರೆಯಲ್ಲಿ ನಿಂತು ನಿನ್ನ
ಪದೆಪದೇ ನೋಡುವ ಕಾತರ.

ಛೀ ಕಳ್ಳಾ..
ಅದೆಂತಾ ಮೋಡಿ ಮಾಡಿದೆ,
ನೀ ನನಗೆ... ನಿನ್ನ
ಬಿಟ್ಟರೆ ಬೇರೇನು
ಕಾಣುತ್ತಿಲ್ಲ ನನಗೆ.

ಬೆಳದಿಂಗಳಲಿ
ನನ್ನ ಹಸಿಕೆನ್ನೆಗೆ,
ನೀ ಕೊಡುವ ಮುತ್ತನು
ನೆನೆದಾಗ ನಿಂತೆ ತುಟಿ ಕಚ್ಚಿ.,
ರೋಮಾಂಚಿತಳಾಗಿ ನೆನೆವೆ
ನನ್ನ ಕಣ್ ಮುಚ್ಚಿ..

ದೂರ ನಿಂತರೂ ಸರಿ,
ನನ್ನನು ಕಣ್ಗಳೊಂದಿಗೆ
ಕೂಡಿ, ಕಣ್ಣಲ್ಲೆ ಸರಸವಾಡುವ
ನೀ ಮಹಾರಸಿಕ ಕಣೋ....

ನಿನ್ನ ತುಂಟ ಕಣ್ಣೋಟ,
ಹೂನಗೆಯಿಂದ ಅರಳುವ ಪ್ರೀತಿ,
ಈ ಜನ್ಮದಲಿ, ಆ ದೇವರಲಿ ಬೇಡಿ
ನಾ ಪಡೆದು ತಂದ ಆಸ್ತಿ..!