Friday, September 10, 2010

ಮಹಾರಸಿಕ


ಹೇ ಹುಡುಗಾ..
ನನ್ನೆದೆ ಪ್ರೀತಿಯ ಸಿರಿಯ
ಕೊಳ್ಳೆಹೊಡೆದ ನೀ
ರಸಿಕ ಮಹಾಶಯ ಕಣೋ...

ನಿನ್ನೆದುರು ನಿಂತಾಗ,
ಎಂಥದ್ದೋ ಮುಜುಗರ.
ಆದರೂ ಗೊತ್ತಿಲ್ಲ, ಕಾಡಿದೆ
ಮರೆಯಲ್ಲಿ ನಿಂತು ನಿನ್ನ
ಪದೆಪದೇ ನೋಡುವ ಕಾತರ.

ಛೀ ಕಳ್ಳಾ..
ಅದೆಂತಾ ಮೋಡಿ ಮಾಡಿದೆ,
ನೀ ನನಗೆ... ನಿನ್ನ
ಬಿಟ್ಟರೆ ಬೇರೇನು
ಕಾಣುತ್ತಿಲ್ಲ ನನಗೆ.

ಬೆಳದಿಂಗಳಲಿ
ನನ್ನ ಹಸಿಕೆನ್ನೆಗೆ,
ನೀ ಕೊಡುವ ಮುತ್ತನು
ನೆನೆದಾಗ ನಿಂತೆ ತುಟಿ ಕಚ್ಚಿ.,
ರೋಮಾಂಚಿತಳಾಗಿ ನೆನೆವೆ
ನನ್ನ ಕಣ್ ಮುಚ್ಚಿ..

ದೂರ ನಿಂತರೂ ಸರಿ,
ನನ್ನನು ಕಣ್ಗಳೊಂದಿಗೆ
ಕೂಡಿ, ಕಣ್ಣಲ್ಲೆ ಸರಸವಾಡುವ
ನೀ ಮಹಾರಸಿಕ ಕಣೋ....

ನಿನ್ನ ತುಂಟ ಕಣ್ಣೋಟ,
ಹೂನಗೆಯಿಂದ ಅರಳುವ ಪ್ರೀತಿ,
ಈ ಜನ್ಮದಲಿ, ಆ ದೇವರಲಿ ಬೇಡಿ
ನಾ ಪಡೆದು ತಂದ ಆಸ್ತಿ..!

2 comments: