Friday, September 10, 2010

ಕಣ್ ಹನಿ


ಮರೆಯಾದೆಯಾ ಚೆಲುವೇ,
ನನ್ನ ಮರೆತು ನೀ ಮರೆಯಾದೆಯಾ?

ಪ್ರತಿರಾತ್ರಿಯ ತಂಪಿನಲಿ,
ಹುಣ್ಣಿಮೆಯ ಬೆಳದಿಂಗಳಿನಲಿ,
ನಾ ಹೆಣೆದುಕೊಟ್ಟಿದ್ದ
ಸಾವಿರ ಕನಸುಗಳನು ಕದ್ದು
ಮರೆಯಾದೆಯಾ ಚೆಲುವೆ.

ನನ್ನೆದೆಯ ಕನಸುಗಳಲಿ,
ನೀನಿರದ ರಾತ್ರಿಯಲಿ,
ಚಂದಿರನೇ ಸುಡುವಂತಾಯ್ತು..!
ನನ್ನ ಪ್ರೇಯಸಿ ನೀನು,
ಅದು ಹೇಗೆ ಹಚ್ಚಿದೆ,
ಈ ಹೃದಯದಲಿ ಆರದಾ ಬೆಂಕಿ.

ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ.
ನೀ ಮರೆತುಹೋದೆ,
ಎಂಬ ಬೇಸರವೂ ನನಗಿಲ್ಲ.
ಆದರೂ ಗೊತ್ತಿಲ್ಲ ಕಣೇ,
ಎದೆಯಲ್ಲಿ ಕರಗದ ನೋವೊಂದು
ಕಾಡುತಿದೆ, ಈ ಮನಕೆ
ನೀ ಮಾಡಿದ ಗಾಯದಿಂದ.

ನನ್ನನು ನೆನೆದು ನಿನ್ನ
ಕಣ್ಗಳಲಿ ಜಿನುಗುವ
ಒಂದೇ ಒಂದು "ಕಣ್ ಹನಿ"
ಸಾಕು ಕಣೇ... ನನಗೆ.
ನಿನ್ನ ಹೃದಯದಲಿ
ನನ್ನ ಅನಂತ ಪ್ರೀತಿ..
ಇನ್ನೂ ಜೀವಂತವಾಗಿದೆ,
ಎಂಬ ತೃಪ್ತಿ ನನಗೆ.

17 comments:

  1. thanks.. sindura..

    kavana baredaddu.. yarigu... alla..

    Nijavada.. preethi.. KANNA HANIyalli.. irutte.. antha simple feel nalli.. barede...

    ReplyDelete
  2. ಮರೆಯಾದ ಗೆಳತಿಯ ನೆನೆದು ಗೋಳಿಡುವ ಕರುಣಾಜನಕ ಗಾಥೆಯಂತೆ ತೋರಿದರೂ ಅವಳ ಮೇಲಿನ ಅನೀರ್ವಚನೀಯ ಪ್ರೀತಿಯು ತನ್ನ ತಾನಿಟ್ಟ ಪ್ರೀತಿ ಇನ್ನೂ ಜೀವಂತವಾಗಿದೆಯೆನ್ನುವ ಕವಿ ಮನಸ್ಸು ಅತ್ಯಂತ ಕೋಮಲವಾಗಿದೆ.ತುಂಬಾ ಇಷ್ಟವಾಯಿತು.

    ReplyDelete
  3. ಕವಿತೆಯಲ್ಲಿ ಪ್ರೀತಿಯ ಭಾವಗಳು ಸುಂದರವಾಗಿ ಅರಳಿ ನಿಂತಿವೆ ರಾಘವೇಂದ್ರರವರೆ.. ಕೇವಲ ವಿರಹವನ್ನಷ್ಟೆ ವಿವರಿಸದ ಕವಿತೆ, ಪ್ರೀತಿಯ ಆಳವನ್ನು ಓದುಗರಿಗೆ ಕಟ್ಟಿಕೊಡುವ ಪ್ರಯತ್ನ ಮಾಡಿದೆ.. ಕಲ್ಪನೆಗಳು ನೀವು ಕಟ್ಟಿಕೊಟ್ಟಿರುವ ಉಪಮೆಗಳಲ್ಲಿ ನರ್ತಿಸಿ ನಲಿದಿವೆ.. ಪ್ರೀತಿಯ ಗುಟುಕು ನೀಡುತ್ತಾ ಕವಿತೆ ಮನಗೆಲ್ಲುವಲ್ಲಿ ಯಶ ಕಾಣುತ್ತದೆ.. ತುಂಬಾ ಹಿಡಿಸಿತು, ಚೆಂದವಾದ ಕವಿತೆ..:)))
    ನನ್ನನು ನೆನೆದು ನಿನ್ನ
    ಕಣ್ಗಳಲಿ ಜಿನುಗುವ
    ಒಂದೇ ಒಂದು "ಕಣ್ ಹನಿ"
    ಸಾಕು ಕಣೇ... ನನಗೆ.
    ನಿನ್ನ ಹೃದಯದಲಿ
    ನನ್ನ ಅನಂತ ಪ್ರೀತಿ..
    ಇನ್ನೂ ಜೀವಂತವಾಗಿದೆ,
    ಎಂಬ ತೃಪ್ತಿ ನನಗೆ.
    ಈ ಸಾಲುಗಳಲ್ಲಿರುವ ನಿಮ್ಮದೇ ಆದ ಪ್ರೀತಿಯ ವ್ಯಾಖ್ಯಾನ ನೀಡವ ಪ್ರಯತ್ನ ಮನಸ್ಸಿಗೆ ಮೆಚ್ಚುಗೆಯಾಗುತ್ತದೆ..:)))

    ReplyDelete
  4. ಪ್ರೀತಿಯಡೆಗಿನ ಭಾವನೆಯ ತೀವ್ರತೆ ಚನ್ನಾಗಿ ಮೂಡಿಬಂದಿದೆ. ಪ್ರೇಯಸಿಯ ನೆನೆದು ಘೀಳಿಡುವ ಮನಸಿನ ಸಂಕಟವನ್ನು ಚನ್ನಾಗಿ ಹೊರಹಾಕಿದ್ದೀರಿ ಮಿತ್ರ.

    ReplyDelete
  5. ಈ ಕವನ ಸಂಪೂರ್ಣ ನನಗೇ ಅನ್ವಯವಾಗುವಂತಿದೆ

    ReplyDelete
  6. ಪ್ರೀತಿಯನ್ನು ಕಳೆದುಕೊಂಡ ಎಲ್ಲಾ ಹೃದಯಗಳ ಭಾವಗ ಲಾಸ್ಯವನ್ನು ಚೆನ್ನಾಗಿ ಪದಗಳಲ್ಲಿ ಹಿಡಿದಿಟ್ಟಿದ್ದೀರಿ.. ನಿಮ್ಮ ಶೈಲಿ ನನಗಿಷ್ಟ.. ಹೀಗೇ ಬರೆಯುತ್ತಿರಿ.. ನಿಮಗೆ ಶುಭವಾಗಲಿ.. :))

    ReplyDelete
  7. ಈ ಕವನವು.. ನನ್ನ "ಕಣ್ ಹನಿ" ಸಂಕಲನದ ಟೈಟಲ್ ಸಾಂಗ್ ಅಂತಾರಲ್ಲ.. ಹಾಗೇ. ನಿಜ ಪ್ರೀತಿಗೆ ಸಾವಿಲ್ಲ, ಕೊನೆಯಿಲ್ಲ ಎಂದು ಬಹಳ ಮಂದಿ ಹೇಳುತ್ತಾರೆ. ಆದರೆ ಪ್ರಿಯತಮ/ಮೆ ಕೈಕೊಟ್ಟಾಗ ಮಾತ್ರ ಕುರುಡು ಪ್ರೀತಿ ಎನ್ನುವುದು ಎಷ್ಟು ಸರಿ ಅಲ್ಲವೇ. ಅದೇ ರೀತಿ ಇಲ್ಲೊಬ್ಬ ಪ್ರೇಮಿಯ ಪ್ರೇಯಸಿ ಕೈಕೊಟ್ಟು ಹೋದಾಗ, ಅವಳ ಮನಸನ್ನು ಚೆನ್ನಾಗಿ ಅರಿತಿದ್ಧ ಹುಡುಗ, ಅವಳ ಒಂದೇ ಒಂದು ಕಣ್ ಹನಿಯನ್ನು ಮತ್ತೆ ಹುಡುಕಲಾರಂಭಿಸುತ್ತಾನೆ. ಹಾಗೇ ಪ್ರೀತಿಯ ಅಮರತೆಯನ್ನು ಸಾಧಿಸುವಲ್ಲಿ ಗೆಲ್ಲುತ್ತಾನೆ. "ಪ್ರೀತಿ ಮಧುರ ತ್ಯಾಗ ಅಮರ" ಎಂದು ಹೇಳುವುದು ಅಲ್ಲ. "ಪ್ರೀತಿ ಅಮರ, ತ್ಯಾಗ ಮಧುರ" ಎನ್ನಬೇಕಷ್ಟೆ.

    ReplyDelete
  8. ನನ್ನೆದೆಯ ಕನಸುಗಳಲಿ,
    ನೀನಿರದ ರಾತ್ರಿಯಲಿ,
    ಚಂದಿರನೇ ಸುಡುವಂತಾಯ್ತು..!
    ನನ್ನ ಪ್ರೇಯಸಿ ನೀನು,
    ಅದು ಹೇಗೆ ಹಚ್ಚಿದೆ,
    ಈ ಹೃದಯದಲಿ ಆರದಾ ಬೆಂಕಿ.!!

    ಸುಂದರ ಸುಂದರ !!

    ReplyDelete
  9. Prashanth P KhatavakarJanuary 12, 2012 at 9:35 PM

    ಪ್ರೆಮವಿರಹ ಅತಿಯಾಗಿ ಕಾಣುತ್ತವೆ ನಿಮ್ಮ ಕವಿತೆಯಲ್ಲಿ .. ಏನಾದರೂ ವಿಶೇಷ ಕಾರಣಗಳು.. :)

    ReplyDelete
  10. ha..ha.. ha.. .. hagenilla... geleya.. Prashanth

    ReplyDelete
  11. ಚೆನ್ನಾಗಿದೆ ಗೆಳೆಯ.. ವಿರಹ ವೇದನೆಯ ಕಾವ್ಯ ರೂಪವಿದು..
    ಮನಸ್ಸಿನಾಳದ ಅಧಮ್ಯ ಪ್ರೀತಿ ಇನ್ನೂ ಇದೆ ಎಂಬ ತೃಪ್ತಿಯೊಂದಿಗೆ
    ಕೊನೆಮಾಡುವ ಪರಿ ಇಷ್ಟವ್ವಯಿತು... :))

    ReplyDelete
  12. ಬರಹ ಚಿತ್ತಾರ ಕಾವ್ಯ ಸಾಗರJanuary 12, 2012 at 9:38 PM

    ಭೇಷ್... ಚಂದದ ಕವಿತೆ... ಸೊಗಸಾಗಿದೆ....

    ReplyDelete
  13. ಧನ್ಯವಾದಗಳು.. ಗೆಳೆಯ.. Hussain Muhammed

    ReplyDelete
  14. ಧನ್ಯವಾದಗಳು ಗೆಳೆಯ.. ಬರಹ ಚಿತ್ತಾರ ಕಾವ್ಯ ಸಾಗರ

    ReplyDelete
  15. ನನ್ನೆದೆಯ ಕನಸುಗಳಲಿ,
    ನೀನಿರದ ರಾತ್ರಿಯಲಿ,
    : ಈ ಸಾಲಿನಲ್ಲಿರುವ ಭಾವ ಚೆನ್ನಾಗಿದೆ. ಒಂದು ಗೈರು ಹಾಜರಿಯಲ್ಲಿ ಕನಸುಗಳು ಗರಿಗೆದರಿದವು.

    ReplyDelete