ಗೆಳೆಯರೇ... ನನ್ನ ಗೆಳೆತಿಯರೇ...
ಕಳೆದು ಹೋದ ದಿನಗಳಲಿ
ಕಂಡ ಕೆಟ್ಟ ಕನಸುಗಳೆಷ್ಟೋ,
ಮಾಸದ ಕಹಿನೆನಪುಗಳೆಷ್ಟೋ..
ಮರೆಯಲಿ ಈ ಮನ,
ಅದೆಲ್ಲ ಮರೆತು ನಲಿವುದೇ ಜೀವನ.
ನೂರೆಂಟು ನೋವು-ನಲಿವುಗಳ ನಡುವೆ,
ಮನಸು ಹಕ್ಕಿಯಂತೆ ಹಾರಿ..
ಬಾಳಲಿ ಸುಖ-ಸಂತೋಷವು
ಜೋಗ ಜಲಪಾತದಂತೆ ಧುಮ್ಮುಕ್ಕಿ
ಬರಲಿ ನಿಮ್ಮ ಮನದೊಳಗೆ
ಈ ನವವರುಷದ 365
ದಿನಗಳಲ್ಲೂ... ನಮ್ಮೊಳಗೆ.
ನಮ್ಮಗಳ ಪರಿಚಯ ಆಕಸ್ಮಿಕ,
ನಮ್ಮ ಸ್ನೇಹವೇ ಆಕರ್ಷಕ,
ಬಾಡದಿರಲಿ ಭಾವನೆ,
ಬಾರದಿರಲಿ ವೇದನೆ,
ಬರುವ ಹೊಸದಿನಗಳಲಿ
ನಿಮ್ಮ ಸುಖ-ಸಂತೋಷದ
ಕ್ಷಣಗಳ ಹಂಚಿಕೆ ನನ್ನೊಟ್ಟಿಗೆ ಇರಲಿ..
WISH YOU HAPPY NEW YEAR - 2011
No comments:
Post a Comment