Thursday, May 26, 2011

ಇನಿಯಾ..!! ನಿಮ್ಮ ಪ್ರೀತಿ..ಕಾಡದಿರಲಿ ವಿರಹದ ಭೀತಿ,
ನನಗಂತು ಬೇಕು ಸದಾ,
ಇನಿಯಾ .. ನಿಮ್ಮ ಪ್ರೀತಿ..!!

ಮದುವೆಯಾದ ಹೊಸತರಲ್ಲಿ,
ನನ್ನ ನಡು ಹಿಡಿದು,
ತುಟಿಗೆ ತುಟಿಯೊತ್ತಿ ಅಂದು
ನೀವು ಕೊಟ್ಟ ಚುಂಬನಕೆ,
ನನ್ನ ಮೈಯೆಲ್ಲಾ ಕಂಪಿಸಿ,
ನಿಮ್ಮನ್ನು ಇನ್ನೂ ಬಿಗಿದಪ್ಪಿದೆ,
ಏನಾಗುತಿದೆ ಎಂಬ ಅರಿವಿಲ್ಲದೇ,
ಕಣ್ಮುಚ್ಚಿ ಹಿತವಾಗಿ ನರಳುತ್ತಿದ್ದೆ,
ಅದ್ಯಾಕೊ ನನಗೂ ಗೊತ್ತಿಲ್ಲದೆ.

ಪ್ರತಿದಿನ ಸಂಜೆಯಲಿ, ನೀವು
ನನ್ನ ಹೆರಳ ಸರಿಸಿ, ಮುತ್ತಿಟ್ಟು
ಮಲ್ಲಿಗೆ ಹೂ ಮುಡಿಸುವ ಪರಿಗೆ,
ಎಳೆ ಮಗುವಿನಂತೆ ನಾನು,
ನಲಿದಾಡುತ್ತಿದ್ದೆ ನಿಮ್ಮ ತೋಳಲಿ,
ನೀವು ತೋರುವ ಅನಂತ ಪ್ರೀತಿಗೆ..

ಯಾವ ಜನುಮದ ಪುಣ್ಯವೋ,
ನಾ ಕಾಣೆ, ನನಗೆ ಸಾವೇ ಬರದಿರಲಿ..
ನನಗಂತೂ ಬೇಕು... ಸದಾ
ಇನಿಯಾ.. ನಿಮ್ಮ ಪ್ರೀತಿ..!!!

8 comments:

 1. ಯಾವ ಜನುಮದ ಪುಣ್ಯವೋ ನಾ ಕಾಣೆ!!!!!!
  ಇಂತ ಸುಂದರ ಕವನ ಓದುವ ಭಾಗ್ಯ ನನ್ನದು

  ಇಂತಿ ನಿಮ್ಮ ಪ್ರೀತಿಯ
  ನಂದಿ ಜೆ. ಹೂವಿನಹೊಳೆ

  ReplyDelete
 2. ಹಾಯ್ ರಾಘು ಕವನ ತುಂಬಾ ಚನ್ನಾಗಿದೆ ಯಾರಾದರೂ ಜೀವನದಲ್ಲಿ ಹೊಸದಾಗಿ ಮದುವೆಯಾದವರಿಗೆ ಈ ಕವನ್ ಗಿಪ್ಟ್. ತುಂಬಾ ಚನ್ನಾಗಿದೆ ಇದು ಮದುವೆಯಾದ ಮೊದಲಿಗಾಯ್ತು, ಇನ್ನೊಂದು ಮದುವೆಯಾದ ನಂತರದ್ದು ಬರುತ್ತಾ ಅಂತ ನೋಡ್ತಾ ಇರ್ತೀವಿ

  ReplyDelete
 3. ಸತೀಶ್ ಬಿ ಕನ್ನಡಿಗMay 30, 2011 at 12:08 AM

  ಒಳ್ಳೆಯ ಸಾಲುಗಳನ್ನು ರಚಿಸಿದ್ದೀಯ ರಾಘು, ಈ ಕವನವನ್ನು ಮತ್ತಷ್ಟು ಮುಂದುವರೆಸಬಹುದು ಎಂಬುದು ನನ್ನ ಭಾವನೆ ಪ್ರಯತ್ನಿಸು ಒಳ್ಳೆದಾಗಲಿ

  ReplyDelete
 4. super raghu it soo nice keep going
  and best of luck for Next Kavana

  ReplyDelete