
ಅಮ್ಮಾ ಎನ್ನೋ ಎರಡಕ್ಷರದಲಿದೆ
ಪ್ರೀತಿ-ವಾತ್ಸಲ್ಯ-ಮಮತೆಯ ಸಿರಿ,
ಆ ಸಿರಿಯ ತುಂಬಿದ ಹೃದಯವು
ನನ್ನ ಜೀವದಾತೆಯದು..,
ನನ್ನ ಕಣ್ಗಳಲಿ ನೀರು ಬಂದರೂ,
ನೀ ಪಡುವ ಹೃದಯದ ನೋವು,
ನಾ ತಪ್ಪು ಮಾಡಿದ ಕ್ಷಣದಲಿ
ಬೆತ್ತದೇಟು ಕೊಟ್ಟು, ಮತ್ತೊಮ್ಮೆ
ಅರಸಿ ಬಂದು, ಮಮತೆ ತೋರುವ
ನಿನ್ನ ಪ್ರೀತಿಗೆ ಸರಿಸಮಾನರುಂಟೆ..?
ನನ್ನ ಪ್ರತಿ ಹೆಜ್ಜೆಯನೂ ಸಹ
ಸೂಕ್ಷ್ಮದಿ ಗಮನಿಸಿ, ಸರಿಪಡಿಸಿ,
ನಾನಿಡುವ ಪ್ರತಿ ಹೆಜ್ಜೆಯಲೂ
ಗೆಲುವು ಉಂಟಾಗುವಂತೆ ಹರಸಿ
ಹಾರೈಸಿದ ನಿನ್ನ ಹೃದಯದಲಿ
ಬತ್ತದಾ ಪ್ರೀತಿ ಸರಿಸಮಾನರುಂಟೆ..?
ಇಂದು ನಾನು ಬುದ್ದಿವಂತನಾಗಿ,
ಏನಾದರೂ ಸಾಧಿಸದವನಾದರೆ,
ನಿನ್ನ ಹರಕೆಯ ಫಲವಷ್ಟೆ ಹೊರತು
ನನ್ನ ಅದೃಷ್ಟವೇನಲ್ಲ .. ನನ್ನಮ್ಮಾ..
ನೀ ತೋರುವ ಪ್ರೀತಿ, ಮಮತೆ,
ಮತ್ತ್ಯಾರಿಂದಲಾದರೂ ಪಡೆಯುವುದುಂಟೆ..?
ಅಮ್ಮಾ.. ನನ್ನ ಪ್ರೀತಿಯ ಅಮ್ಮ...
WISH YOU HAPPY MOTHER'S DAY... to
ReplyDeleteAll my friends...
ammanige ammne sati alva
ReplyDeletemother is god ammana munde mathondu devaru ella
ReplyDeletevery nice raghavendra really very good
ReplyDeletenice
ReplyDeletesitaram
superb friend
ReplyDeleteತಾಯಿ ಮೇಲಿನ ಮಮತೆ,ಪ್ರೀತಿ,ವಾತ್ಚಲ್ಯ,ಅಕ್ಕರೆ.ಕಕ್ಕುಲತೆಗಳೇ ಹಾಗೆ ಪ್ರತಿ ಕ್ಷಣಗಳಲ್ಲೂ ಆಕೆಯ ಬಗ್ಗೆ ಅಭಿಮಾನ ತುಂಬಿದ ಸುಂದರ ನುಡಿಗಳು ಕವನಗಳಾಗಿ ಬಿಡುತ್ತವೆ.ನಿಮ್ಮ ಮೇಲಿನ ಅಮ್ಮನ ಪ್ರೀತಿ ಅಗಾಧವಾಗಿದೆ.ಅಮ್ಮನಿಗೆ ನುಡಿ ನಮನ ಹೇಳಿ ಅವಳ ಮೇಲಿನ ಬಿಡಿಸಲಾಗದ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿದ್ದೀರಿ.ಕವಿತೆ ಸುಂದರವಾಗಿದೆ.ಕವನವನ್ನು ಇನ್ನಷ್ಟು ಪಕ್ವಗೊಳಿಸಬಹುದಾಗಿದೆ.(ಏನಾದರೂ ಸಾಧಿಸದವನಾದರೆ) ಈ ಸಾಲನ್ನು ಏನಾದರೂ ಸಾಧಿಸಿದವನಾದರೆ ಎಂದು ಸರಿಪಡಿಸಿಕೊಳ್ಳಿ.
ReplyDeleteತುಂಬಾ ಚೆನ್ನಾಗಿದೆ ಅಮ್ಮ ನ ಪ್ರೀತಿನೆ ಆಗೇ ಅಲ್ವ . ನಿಜವಾಗಲು ಅಮ್ಮ ನ ಪ್ರೀತಿ ವತ್ಸಲ್ಯಕೆ ಸರಿ ಸಾಟಿ ಇಲ್ಲ
ReplyDeleteಅಮ್ಮನ ಪ್ರೀತಿ ಹೊಗಳಲು ಪದಗಳೇ ಸಾಲಲ್ಲ..
ReplyDeleteತುಂಬಾ ಚೆನ್ನಾಗಿದೆ ಆದ್ರೆ ಸ್ವಲ್ಪ ಪದ ತಪ್ಪಿದೆ ""ಸಾಧಿಸಿದವನಾಗಿದ್ದರೆ " ಆದ್ರೆ ಚೆನ್ನ