ಅಯ್ಯೋ ಬೇಸತ್ತು ಹೋಗಿತ್ತು
ಮನ, ಸಾಕುಸಾಕಾಗಿಹೋಗಿತ್ತು.
ನಿನ್ನ ಕೀಟಲೆಗಳಿಗೆ,
ನಿನ್ನ ತರಲೆ ಕಾಟಗಳಿಗೆ,
ಮೊದಲೆ ತಾಳ್ಮೆಯಿರದ ನನಗೆ,
ನಿನ್ನ ಕೊಂದುಬಿಡುವಟ್ಟು,
ಕೋಪ ಉಕ್ಕಿ ಬರುತ್ತಿತ್ತು..
ನೀ ಅದು ಏನು ಮಾಯೆ,
ಮಾಡಿದೆಯೋ ಏನೋ..?
ನೀನೀರದ ಹೊತ್ತಲ್ಲಿ ನಿನ್ನದೇ
ದಾರಿಯನು ನಾ ಕಾಯುತ್ತಿದ್ದೆ.
ನೀ ಬಂದ ಕ್ಷಣದಲಿ, ಕಾಟ
ತಾಳಲಾರದೆ ದೂರದಲ್ಲೆ ನಿಂತು,
ನಾ ನಿನ್ನ ಕದ್ದು ಕದ್ದು ನೋಡುತ್ತಿದ್ದೆ.
ಇದು ಸ್ನೇಹಾನೋ, ಪ್ರೀತಿನೋ
ನನಗೆ ತಿಳಿಯದ ಹಾಗಿದೆ..
ನನ್ನ ಕೋಪವನು ಕರಗಿಸುವ
ಶಕ್ತಿ, ಆ ನಿನ್ನ ನಗುವಿಗಿದೆ.
ನನಗೆ ನಿನ್ನಲಿ ಪ್ರೀತಿ ಮೂಡಿದೆ,
ಕಣೋ .. ನನಗೂ ಗೊತ್ತಿಲ್ಲದೆ.
ಸದಾ ನಿನ್ನ ಜೊತೆಯಲ್ಲಿರೋ
ಆಸೆ ಕಾಡುತಿದೆ ನನಗೆ.
ಹಸಿವೂ ಇಲ್ಲ, ನಿದಿರೆಯೂ ಇಲ್ಲ..
ನಿನ್ನ ನಗುಮೊಗವೇ ಕಾಣುತಿದೆ,
ಎಲ್ಲೆಲ್ಲೂ ಹಗಲಿರುಳು ನನಗೆ.
ನೀನೇ ನನ್ನವನಾಗಬೇಕು,
ಬಾಳಬೇಕು ನಾ, ಖುಷಿಯಾಗಿ ಹೀಗೆ.
ಆಹಾ...!!! ಮುಗುಳ್ನಗೆಯ ನೋಡು,
ಕೊನಗೂ ನನ್ನ ಹೃದಯ
ಕದ್ದುಬಿಟ್ಟೆಯಲ್ಲೋ... ಛೀ ಕಳ್ಳಾ..!!!
its good raghu
ReplyDeletereally tumba chennagide kavanagalu only compliments no comments..
ReplyDeleteGood one Raghu ;)
ReplyDeletenanu kavyasakte. tumba khushi aaythu kavanagalannu nodi. thanks for sending link & kavigalige shubhavaagali.
ReplyDeletevery good beautiful
superb .... nimma kavana hennina bhavanegalannu sogasaagi hommiside... nija elrigu heege agutte anta nange ansutte...
cheee kalla............. tumba live agide
Thank U Bharathi, Asha Basavaraj and Sunil
ReplyDeleteondu sankeerna kavana
ReplyDeleteThankU Seetharam Sir
ReplyDeletethumbha chanagide sir
ReplyDeleteIts morvales kavana ragavendra i like it .
ReplyDeletehi raghu kavana odhidhe chennagidhe.
ReplyDeleteahdu hege barithiri hudugana bhavanegale bere nivu hudugiyara bhavane galana hege astu kulankushavagi barithithiri
Its Nice .. boss..!!
ReplyDeleteಕಲ್ಯಾಣ್ ನಂತರ ಪ್ರೇಮ ಕವಿ ಸಾಲಲ್ಲಿ ರಾಘವೇಂದ್ರ ಇರಬಹುದೇನೋ.... ತುಂಬಾ ಚನ್ನಾಗಿದೆ
ReplyDeleteಪ್ರಯತ್ನ ಮುಂದುವರೆಯಲಿ
really tumba chennagide kavanagalu only compliments
ReplyDeleteಅವಳ ಹೃದಯದ ಪಿಸುಮಾತು ಕೇಳಬಲ್ಲಿರಾದರೆ ಅವಳನ್ನೂ ಗೆಲ್ಲಬಲ್ಲಿರಿ.
ReplyDeleteಜಯವಾಗಲಿ.
ರಾಘವೆಂದ್ರರೆ
ReplyDeleteಪರಕಾಯ ಪ್ರವೇಶ ಚೆನ್ನಾಗಿದೆ
ಒಬ್ಬ ಹುಡುಗಿಯೊಳಗೆ ಪರಕಾಯ ಪ್ರವೇಶಮಾಡಿ ಆಕೆಯ ಭಾವಗಳನ್ನು ಹೆಕ್ಕಿ ತೆಗೆದಿರುವುದು ಸುಂದರವಾಗಿ ಮೂಡಿಬಂದಿದೆ.. ಆಕೆಯ ಭಾವಗಳಲ್ಲಿನ ಮುಗ್ದತೆಯನ್ನು ಕವಿತೆಯ ಚಿತ್ತಾರದಲ್ಲಿ ಸುಂದರವಾಗಿ ಮೂಡಿಸಿದ್ದೀರಿ.. ಪ್ರೀತಿ ಪಡಿ ಮೂಡಿದಾಗಿನ ಭಾವದಲ್ಲಿನ ಚಡಪಡಿಕೆಗಳು, ಮತ್ತು ಪ್ರೀತಿಯು ಅನುಭವಕ್ಕೆ ಸಿಕ್ಕಿದಾಗಿನ ಸುಂದರವಾದ ನವಿರಾದ ಭಾವಗಳೂ ಚೆಂದವೆನಿಸುತ್ತವೆ.. ಕವಿತೆ ಹಿಡಿಸಿತು..:)))
ReplyDeleteಮತ್ತೊಬ್ಬರ ಮನಸಿನ ಒಳ ಅರಿಯಲು ಒಂದು ಪುಟ್ಟ ಪ್ರಯತ್ನ ಮಾಡಿದ್ದೇನೆ... ಗೋಪಿನಾಥ್ ಸರ್. Bellala Gopinath Rao
ReplyDeleteಹೆಣ್ಣಿನ ಮನಸು ಅರಿಯುವುದು ಕಷ್ಟ ಅಂತ ಹೇಳುತ್ತಾರೆ. ಆದರೂ ಏನೋ ಒಂದು ಪ್ರಯತ್ನ ಮಾಡಿ, ಹುಡುಗನ ಪ್ರೀತಿಯನ್ನು ಒಪ್ಪಲೋ ಬೇಡವೋ ಎಂಬ ದ್ವಂದ್ವ ಮನಸಿನಲಿ ಚಡಪಡಿಸುವ ಹುಡುಗಿಯ ಮನಸಿನ ಭಾವನೆಗಳನ್ನು ಸಾಧ್ಯವಾದಷ್ಟು ಕವಿತೆಯಲ್ಲಿ ಪ್ರತಿಬಿಂಬಿಸಿದ್ದೇನೆ. ನಿಮ್ಮ ಕಾಮೆಂಟಿಗೆ ಧನ್ಯವಾದಗಳು.. Prasad V Murthy
ReplyDeleteo o o really she caputre ur heart
ReplyDelete