ಯಾವ ಪದಗಳ
ಬಳಸಿ ಹೊಗಳಲಿ
ಕನ್ನಡತಿಯ ಕಣ್ಗಳ ಅಂದ,
ನಾ ಕಳೆದುಹೋದದ್ದೆ
ಗೊತ್ತಾಗಲಿಲ್ಲ, ಮೈಮರೆತು
ನಿಂತಾಗ ನೋಡುತ್ತಾ ಚೆಂದ.
ಕಾಮನಬಿಲ್ಲಿನಂತ
ಹುಬ್ಬುಗಳ ನಡುವಣ ಬಿಂದಿ,
ಆ ನಯನಗಳ ಅಂಚಲಿ
ಕಾಡಿಗೆಯ ಕಡುಗಪ್ಪು,
ಕಣ್ಣು ಮಿಟುಕಿಸದೇ ನೋಡುತ್ತಾ
ನಿಂತೆ, ನಾ ನಿನ್ನ ನೋಡಲು
ಬಂದ ಮೊದಲ ದಿನ.
ನನಗಂತೂ ಗೊತ್ತಿಲ್ಲ ಚೆಲುವೇ...
ನಿನಗೆ ಬಂಧಿಯಾದೆ ಹೇಗೆ..ನಾ..!!
ಕವಿ ನಾನಾಗಿ ಹೋದೆ
ಸಖಿ, ನಿನ್ನ ಕಣ್ಗಳನು ನೋಡುತ್ತಾ
ಅವುಗಳ ಬಣ್ಣನೆಯ ಮಾಡುತ್ತಾ..!!
ಕಾಡಿದೆ ಚೆಲುವೆ ನನಗೆ,
ನಿನ್ನ ಮನೋಹರ ಕಣ್ಣೋಟ.
ನೂರು ಜನುಮಗಳು
ಹೀಗೆಯೇ ಇರಲಿ, ಸವಿಯಬೇಕು
ನಿನ್ನ ನಯನಗಳ ಸವಿನೋಟ...
ನಯನ ಮನೋಹರ..
ನನ್ನವಳ ಚೆಲುವು..
tumba chennagidhe kanri
ReplyDeleteನಿಮ್ಮ ಈ ಕವಿತೆ ನಯನ ಮನೋಹರವಾಗಿದೆ ಸರ್
ReplyDeleteನಿಮ್ಮ ಎಲ್ಲ ಕಾರ್ಯ ಗಳಿಗೆ all the best
-ನಂದಿ ಹೂವಿನಹೊಳೆ
nanage esta aytu
ReplyDeletetumba sogasagide
ReplyDeletefriend
Its very nice...sir
ReplyDeleteThanks....Poorvi, Nandi Hoovinahole, Anitha and Shaila
ReplyDeletethanks raghavendra its very nice. i liked it
ReplyDeleteThanks Akshatha
ReplyDelete