Sunday, April 17, 2011

ಯಾರಿಗೆ ಮುತ್ತು ಕೊಡಲಿ..?


ಯಾರಿಗೆ ಮುತ್ತು ಕೊಡಲಿ
ಗೆಳತಿ, ಯಾರಿಗೆ ಮುತ್ತು ಕೊಡಲಿ..?

ಆ ಸಂಜೆಯಲಿ, ತನು
ತಂಪಾಗಿಸಿ, ನಿನ್ನ
ನೆನಪನ್ನು ಹನಿಹನಿಯಾಗಿ ತಂದ
ಮಳೆಹನಿಗೆ ಮುತ್ತು ಕೊಡಲೇ..

ಅದೇ ದಿನ ರಾತ್ರಿಯಲಿ,
ಬೆಳದಿಂಗಳಲಿ, ಅಪ್ಸರೆಯಂತೆ ನಿನ್ನ
ರೂಪವನ್ನು ಕರೆತಂದ ಬೆಳಕು
ಚೆಲ್ಲಿದ ಚಂದ್ರಮನಿಗೆ ಮುತ್ತು ಕೊಡಲೇ..

ಮನಸಿಗೆ ಆಹ್ಲಾದಕರವಾಗಿ,
ನಿನ್ನ ನೆನಪನ್ನೆ ಅಲೆಅಲೆಯಾಗಿ
ಕರೆತಂದ ತಂಪು ತಂಗಾಳಿಗೆ
ನಾ ನೂರು ಮುತ್ತು ಕೊಡಲೇ...
ನನ್ನ ನಿದಿರೆಯ ಕೆಡಿಸಿ,
ನಿನ್ನ ಮುಂಗುರುಳ ಕಚಗುಳಿ ನೆನಸೋ,
ರಾತ್ರಿಯ ತಂಪಿಗೆ ಮುತ್ತು ಕೊಡಲೇ...

ಮನಸಲಿ ಏನೇ ಇದ್ದರೂ,
ಅದರಲಿ ನಿನ್ನ ಸೌಂದರ್ಯ ಬಿಂಬಿಸುತಾ,
ಕಾಡುವ ಕನಸುಗಳಿಗೆ ಮುತ್ತು ಕೊಡಲೇ..
ಎಷ್ಟೇ ಕೊಟ್ಟರೂ, ಬರಿದಾಗದು
ಗೆಳತಿ, ನನ್ನ ಮುತ್ತಿನ ಸಾಗರ.
ಆದರೂ ಇನ್ನೂ ಎಷ್ಟು ದಿನ,
ನಾ ಬಚ್ಚಿಟ್ಟುಕೊಳ್ಳಲಿ...

21 comments:

  1. hey its super yaar
    nice see so many times i say iam back in love when ur Poems i see u remember that one same again back in 10 years before

    ReplyDelete
  2. supar kanri
    nimma kavana nim tara

    ReplyDelete
  3. ಭಾವಪೂರ್ಣವಾಗಿದೆ ....ಸುಂದರವಾಗಿದೆ....ಸರಳವಾಗಿದೆ...ಅವಳು ಒಪ್ಪಿ, ಅಪ್ಪಿ ಮುತ್ತು ಕೊಟ್ಟರೂ ಕೊಡಬಹುದು !? ಎಲ್ಲಾರು ಶ್ರೇಷ್ಟ ಕವನಗಳನ್ನು ಬರೆಯಲು ಬ್ಯುಸಿಯಾಗಿದ್ದಾರೆ . ನೀ ನಾದರೂ ಪ್ರೇಮ ಕಾವ್ಯಗಳನ್ನು ಬರೆಯುತ್ತಿದ್ದೀಯಲ್ಲಾ ಅದೇ ಸಂತೋಷ ! ಭಾವಕ್ಕೂ , ಭಾಷೆಗೂ ಅಂತರ ತೆಳುವಾಗಿರಲಿ. ಭಾವ ಭಾಷೆನುಂಗುವದು ಬೇಡ. ಭಾವನೆಗೆ ಯಾವುದೇ ಭಾಷೆ ಬೇಕಿಲ್ಲ. ' ನೋಡಿದರೆ ಸಾಕಲ್ಲವೇ ಒಲವೆನ್ನ ಬೇಕೆ '. 'ಮುತ್ತಿ'ನಂತಹ ಕವನ

    ReplyDelete
  4. wow thumba chennagidhe olle kalpane, kanasali kandidhake intha olle kavana nijavagalu nimma kalpaneya hudugi sikre inneshtu barithira, thumb chennagidhe olle romantic song

    ReplyDelete
  5. Thanks... Mohammed, Anitha, Bharath and Padmavathi

    ReplyDelete
  6. ಕಲ್ಪನೆಗೆ ಕಣ್ಣಿಲ್ಲ.. ಅಂತಾರೆ
    ಆದ್ರೆ ನಿಮ್ಮ ಕಣ್ ಹನಿಗೆ ಕಲ್ಪನೆಯಿದೆ...
    ಅದರಿಂದ ಸದಾ ಕಾಲ್ಪನಿಕ ಕವನಗಳು ಮೂಡುತಿರಲಿ...........
    ಅಂದ ಹಾಗೆ ಈ ಕವನ ತುಂಬಾ ಚೆನ್ನಾಗಿದೆ... ದುರ್ಗದ ಹುಲಿ .. ಕನ್ನಡ ಕಲಿ..

    ReplyDelete
  7. nice kavana yaaar...
    naa nam collegue gu toriside..
    she also liked.

    ReplyDelete
  8. idu ellakkinta chennagide...nice poem Raghu ;)

    ReplyDelete
  9. Thank U Sathish, Dhananjaya and SUNIL

    ReplyDelete
  10. ಮುತ್ತಿನ ಹಾರದಂತಹ ಕವನ. ಭಾವ ಲಯಗಳ ಸಮ ಪ್ರಮಾಣದ ಸಮ್ಮಿಲನ ನಿಮ್ಮ ಶೈಲಿ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  11. ನಿಮ್ಮ ಕವಿತೆಗೊಂದು ಮುತ್ತು ಕೊಡಲೇ?? ಚೆನ್ನಾಗಿ ಮೂಡಿ ಬಂದಿದೆ. ಅಪ್ರತಿಮೆ ತೊಳಲಾಟವೊಂದನ್ನು ನಿಮ್ಮ ಕವಿತೆಯಲ್ಲಿ ಸುಂದರ ಅನುಭೂತಿಯೊಂದಿಗೆ ಕಂಡೆ. ಯಾವುದೋ ಜೀವ ಭಾವನೆಗಳ ಹಂದರದಲ್ಲಿ ಸಿಲುಕಿ ತನ್ನ ನಿವೇದನೆಯನ್ನು ಸಾರಿಕೊಳ್ಳುತ್ತಿದೆ. ಇಷ್ಟವಾಯಿತು...

    ReplyDelete
  12. ಅಧರ ಕಂಪನದ ಸಿಹಿ ಮಿಲನದ ಸುಮಧುರ ಮುತ್ತು ಕನ್ನಡ ಬ್ಲಾಗ್ ಗೋಡೆಯ ಮೇಲೆ. ಇನ್ನೇನು ಬೇಕು ಈ ಭಾವಸ್ಪುರಣಕ್ಕಿಂತ ಹೆಚ್ಚಿನದು?

    ReplyDelete
  13. ವ್ಹಾ ರಮ್ಯಮನೋಹರವಾದ ಕವಿತೆ ರಾಘವೇಂದ್ರ..:))) ಮನಸ್ಸಿನಲ್ಲಿ ರಮಣೀಯ ಕಲ್ಪನೆಗಳು ಕನಸಿನ ರೆಕ್ಕೆ ಕಟ್ಟಿಕೊಂಡು ಕುಣಿದವು.. ಪ್ರೀತಿಯ ಭಾವಗಳ ಸಾಗರದಲ್ಲಿ ಮನ ಕರಗಿಹೋಯ್ತು.. ನಲ್ಲೆಗೆ ಮುತ್ತು ಕೊಟ್ಟು ರಮಿಸುವ ನಿಮ್ಮ ರಸಿಕವಾದ ಮಾತುಗಳು ನಿಮ್ಮ ನಲ್ಲೆಯ ಕೆನ್ನೆಗಳನ್ನು ಕೆಂಪಾಗಿಸಿಯಾವು..;) ಹಾಗೆ ಮನ ಸಾವಿರಾರು ಮೈಲಿಗಳವರೆಗೆ ಪ್ರೀತಿಯ ಭಾವದಲ್ಲಿ ತೇಲಿಹೋದಂತಾಯ್ತು ಆಸ್ವಾದನೆಯ ಮನಕ್ಕೆ.. ಪ್ರೀತಿಯ ನೆನಪುಗಳಲ್ಲಿ ಮನ ತೇಲಿ ಹೋದಂತಿದೆ ಕವಿತೆಯ ಭಾವ.. ತುಂಬಾ ಮೆಚ್ಚುಗೆಯಾಯಿತು..:)))

    ReplyDelete
  14. ನಿಮ್ಮ ಕವಿತೆಗೊಂದು ಮುತ್ತು ಕೊಡಲೇ?? ಎಂದು ಕೇಳಿದ್ದು.. ನನಗೆ.. ತುಂಬಾ ಸಂತೋಷವಾಯಿತು.. ನಿಮ್ಮ ಕಾವ್ಯ ಪ್ರೀತಿಗೆ .. ನನ್ನದೊಂದು ಸಲಾಂ. Mohan V Kollegal

    ReplyDelete
  15. ಧನ್ಯವಾದಗಳು Banavasi Somashekhar, and Badarinath Palavalli ji.

    ReplyDelete
  16. ಪ್ರೀತಿಯ ನೆನಪುಗಳಲ್ಲಿ ಮನ ತೇಲಿ ಹೋದಂತಿದೆ ಕವಿತೆಯ ಭಾವ ಎಂದು ಬಣ್ಣಿಸಿದ್ದೀರಿ. ಕವಿತೆಯಲ್ಲಿ ಪ್ರೀತಿಯ ಭಾವನೆಗಳ ಪಯಣ ಸಾರ್ಥಕವಾಯಿತು ಎನಿಸುತಿದೆ. Prasad V Murthy

    ReplyDelete
  17. ಒಮ್ಮೆ ಊರಿನಿಂದ ಬೆಂಗಳೂರಿಗೆ ಬರುವಾಗ.. ತಂಗಾಳಿಗೆ ಮನಸು ಚಿಟ್ಟೆಯಂತೆ ಹಾರಿ, ಬಚ್ಚಿಟ್ಟುಕೊಳ್ಳಲಾಗದ ಮುತ್ತುಗಳ ನೆನೆದು.. ಬರೆದ ಕವಿತೆ ಇದು. ಕವಿತೆಯನ್ನು ಮೆಚ್ಚಿದ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು .

    ReplyDelete
  18. ವಾಹ್, ಅದ್ಬುತ ಕಲ್ಪನೆ - ಭಾವ. ಸುಂದರ ಪದಪ್ರಯೋಗ. ತುಂಬಾ ಚೆನ್ನಾಗಿದೆ ಕವಿತೆ.

    ReplyDelete