Friday, April 15, 2011

ಮಳೆ ನಿಂತ ಮೇಲೆ..


ಬಿಡದೆ.. ಧೋ..!! ಎಂದು
ಸುರಿವ ಮಳೆ ಬಿಡಬಾರದೇ ಬೇಗ
ಎಂದು ಮನ ಹಂಬಲಿಸುತ್ತಿತ್ತು.
ನನ್ನ ಯಾವ ಗೋಜಿಗೂ,
ತಲೆ ಕೆಡಿಸಿಕೊಳ್ಳದೆ ತನ್ನ
ಪಾಡಿಗೆ ತಾನು ಮಳೆ ಸುರಿಯುತ್ತಿತ್ತು.

ತಲೆಯೆತ್ತಿ ನೋಡಿದರೆ,
ಆಗಸದ ತುಂಬೆಲ್ಲಾ ಕಪ್ಪನೆ ಮೋಡ.
ನಮ್ಮ ತೋಟದ ಮನೆಯ ಮಣ್ಣಿನ
ದಾರಿಯಲ್ಲೆಲ್ಲಾ ಪುಟ್ಟ ಪುಟ್ಟ ಕೆರೆ-ದಡ.
ಮಣ್ಣಿನ ವಾಸನೆಯ ಜೊತೆ,
ಮೈದುಂಬಿ ನಿಂತ ವನಸಿರಿ ನೋಡ.
ಮರೆತು ನಲಿದಿದೆ ಮನ, ಎಲ್ಲಾ ದುಗುಡ.

ಮಲೆನಾಡ ವನಸಿರಿಯಂತೆ
ರೋಚಕ ಹೆಣ್ಣಿನ ಚೆಲುವು.
ಗಂಡಿನ ಪ್ರೀತಿಯ ವರ್ಷಧಾರೆ
ಸಿಕ್ಕಾಗಲೆ ತಾನೇ, ಆ ಚೆಂದಕೆ
ಇನ್ನಷ್ಟೂ ಮೋಹಕವು.

ಕೆಸರಲ್ಲಿ ಆಡಬೇಕೆಂಬ
ಆಸೆ ಕಾಡಿತ್ತು ಮಗುವಿನಂತೆ,
ಕಂಡವರು ನಕ್ಕಾರು,
ಎಂದು ಸುಮ್ಮನೆ ನಿಂತೆ.
ಅದೇಕೋ ಗೊತ್ತಿಲ್ಲ,
ಮಳೆ ನಿಂತ ಮೇಲೆ... ಮತ್ತೆ
ಮಳೆ ಬರಬಾರದೇ ಎಂದು
ನಾ ಕಾಯುತ್ತಾ.... ನಿಂತೆ..!!

33 comments:

  1. nimma kavana galu super raghu sir
    janmadinada shubhasheyagalu
    -nandi j . hoovinahole

    ReplyDelete
  2. Nimma...Male .. Kavana.. Tumba Chennagide

    ReplyDelete
  3. E kavana namma balyavana nenapisuthade thank you sir.

    ReplyDelete
  4. Kavana Tumba chennagide....

    ReplyDelete
  5. Maleyalli nenedasta Kushi aytu....

    ReplyDelete
  6. Thank U Padma, Anitha, Mamatha and heraganahalliumesh

    ReplyDelete
  7. ಬಿಡದೆ.. ಧೋ..!! ಎಂದು
    ಸುರಿವ ಮಳೆ ಬಿಡಬಾರದೇ ಬೇಗ
    ಎಂದು ಮನ ಹಂಬಲಿಸುತ್ತಿತ್ತು.
    ನನ್ನ ಯಾವ ಗೋಜಿಗೂ,
    ತಲೆ ಕೆಡಿಸಿಕೊಳ್ಳದೆ ತನ್ನ
    ಪಾಡಿಗೆ ತಾನು ಮಳೆ ಸುರಿಯುತ್ತಿತ್ತು.
    ಚೆನ್ನಾಗಿವೆ, ಈ ಸಾಲುಗಳು

    ReplyDelete
  8. ಮಳೆ ಎಂಬುದೇ ತುಂಬಾ ಸೊಗಸಾದ ವಸ್ತು, ನೈಸರ್ಗಿಕ ಸೌಂದರ್ಯವನ್ನು ಒಂದೇ ಪ್ರತಿಮೆಯಲ್ಲಿ ಆಸ್ವಾದಿಸಬಹುದಾದ ಒಂದು ನೈಸರ್ಗಿಕ ಕೊಡುಗೆ.. ಅದರ ಪರಿಕಲ್ಪನೆಯಲ್ಲಿ ಅರಳುವ ಕವಿತೆಗಳು ಬಹು ಸುಂದರವಾಗಿಯೂ ಮೋಹಕವಾಗಯೂ ಇರುತ್ತವೆ.. ಹಾಗೇ ಮಳೆ ನಿಂತ ನಂತರ ಮಣ್ಣಿನ ಘಮ ನನಗೆ ತುಂಬಾ ಪ್ರಿಯವಾದುದು.. ಕವಿತೆಯಲ್ಲಿ ಪ್ರಾರಂಭವಾದ ವರ್ಷಧಾರೆಯನ್ನು ಪ್ರೀತಿಯ ಪಡಿಯಚ್ಚಾಗಿ ಕವಿತೆಗೆ ಒಗ್ಗಿಸಿಕೊಂಡಿರುವುದು ಸುಂದರವಾಗಿದೆ.. ತುಂಬಾ ಚೆನ್ನಾಗಿದೆ ಕವಿತೆ ರಾಘವೇಂದ್ರ ರವರೆ..:)))

    ReplyDelete
  9. Sathis D. RamanagaraFebruary 11, 2012 at 3:10 AM

    ಇಳೆಯನ್ನು ತಣಿಸಲು ಬರುವ ಮಳೆಯನ್ನೂ ಕಂಡರೆ ಪುಟಾಣಿಗಳಿಗೆ ಕೆಸರಲ್ಲಿ ಆಟವಾಡುವಾಸೆ, ಪ್ರೇಮಿಗಳಿಗೆ ಮಳೆಯಲ್ಲಿ ತೋಯ್ದು, ಹೃದಯದ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವ ಆಸೆ. ಕವಿಗೆ ಬರೆಯಲಿಕ್ಕೆ ವಸ್ತುವೊಂದು ದೊರೆಯಿತಲ್ಲ ಎಂಬ ಸಂತಸ. ರೈತನಿಗೆ ಕೆರೆ ಕಟ್ಟೆಗಳಿಗೆ ನೀರು ಬಂತಲ್ಲ ಎಂಬ ಸಂತಸ. ಹೀಗೆ ಮಳೆ ನಿಂತ ಮೇಲೆ ಹನಿಯೊಂದು ಜಾರಿದಂತೆ ನಿಮ್ಮ ಕವನ ಚನ್ನಾಗಿದೆ. .

    ReplyDelete
  10. ಚೆನ್ನಾಗಿದೆ ಧನ್ಯವಾದಗಳು ಗೆಳೆಯ..

    ReplyDelete
  11. ತುಂಬಾ ಚೆನ್ನಾಗಿದೆ

    ReplyDelete
  12. ಯಾಕೋ ಸ್ವಲ್ಪ ತಣ್ಣನೆಯ ಅನುಭವವಾಯ್ತು ಕವಿತೆಯ ಮೇಲೆ ಬಿದ್ದ ಭಾವದ ಎರಡು ಹನಿ ಸಿಂಚನಕೆ ಕವಿ ಹೃದಯ ತೇವವಾದಂತೆ.

    ReplyDelete
  13. ನಾವುಗಳು ಚಿಕ್ಕವರಿದ್ದಾಗ ಮಳೆ ಬಂದರೆ ಏನೋ ಒಂಥರಾ ಖುಷಿ. ಅಮ್ಮನ ಹತ್ತಿರ ಬೈಸಿಕೊಂಡಾದರೂ ಸರಿ ಮಳೆಯಲ್ಲಿ ನೆನೆಯುತ್ತೇವೆ. ಕುಣಿಯುತ್ತೇವೆ. ದೊಡ್ಡವರಾಗುತ್ತಾ ಮಳೆ ಬಂದರೆ ಸಾಕು ಏನೋ ಇರಿಸು ಮುರಿಸು. ಈ ಕವಿತೆಯಲ್ಲಿ ಇದೇ ಥರ ಬಿಡದೆ.. "ಧೋ..!! ಎಂದು
    ಸುರಿವ ಮಳೆ ಬಿಡಬಾರದೇ ಬೇಗ" ಎಂದು ಹಂಬಲಿಸುವ ಮನಸು ಬದಲಾಗಿ, ಮಳೆಯನ್ನು ಆಹ್ಲಾದಿಸುತ್ತಾ.. ಕೆಸರಲ್ಲಿ ಆಡಬೇಕೆಂಬ ಆಸೆಯನ್ನು ಸೂಚಿಸುತ್ತದೆ. ಆ ಮನಸಿನ ಸೂಕ್ಷ್ಮತೆಯನ್ನು ಕವಿತೆಯಲ್ಲಿ ಪರಿಚಯಿಸಿದ್ದೇನೆ.. ಅಷ್ಟೇ.

    ReplyDelete
  14. ಧನ್ಯವಾದಗಳು ಗೆಳೆಯ ಸತೀಶ್ ಡಿ. ಆರ್. ರಾಮನಗರ....ವಸಂತ್ ಆರ್..ಮಿತ್ರ Pradeep Hegde

    ReplyDelete
  15. ತಣ್ಣನೆಯ ಅನುಭವವನ್ನು ನನ್ನ ಕವಿತೆ ಕೊಟ್ಟಿದೆ ಎಂದು ಹೇಳಿದ Pushparaj Chauta ರವರಿಗೂ ಧನ್ಯವಾದಗಳು..

    ReplyDelete
  16. ಚಂದ ಉಂಟು ರಘು...

    ReplyDelete
  17. ಕೆಲವೊಮ್ಮೆ ಧೋ.. ಎಂದು.. ಕೆಲವೊಮ್ಮೆ ಹನಿಬಿಂದು.. ಕವನಗಳ ಮಳೆಯಲ್ಲಿ ಮೀಯಿಸಿ, ಮಿಂದು... ಮುದವ ನೀಡಲಿ ಗೆಳೆಯಾ ನಿನ್ನ , ಕಾವ್ಯ ಪಯಣ...

    ReplyDelete
  18. ಧನ್ಯವಾದ ಮಂಜು..@Manju M Doddamani

    ReplyDelete
  19. ನಿಮ್ಮ ಹಾರೈಕೆ ಇರಲಿ... ಧನ್ಯವಾದಗಳು ಗೆಳೆಯ Balachandra Hegde

    ReplyDelete
  20. ಅದೇಕೋ ಗೊತ್ತಿಲ್ಲ,
    ಮಳೆ ನಿಂತ ಮೇಲೆ... ಮತ್ತೆ
    ಮಳೆ ಬರಬಾರದೇ ಎಂದು
    ನಾ ಕಾಯುತ್ತಾ.... ನಿಂತೆ..!!
    :ಚೆನ್ನಾಗಿದೆ ಈ ಸಾಲು.

    ReplyDelete
  21. ಕೆಸರಲ್ಲಿ ಆಡಬೇಕೆಂಬ
    ಆಸೆ ಕಾಡಿತ್ತು ಮಗುವಿನಂತೆ,
    ಕಂಡವರು ನಕ್ಕಾರು,
    ಎಂದು ಸುಮ್ಮನೆ ನಿಂತೆ.
    ಅದೇಕೋ ಗೊತ್ತಿಲ್ಲ,
    ಮಳೆ ನಿಂತ ಮೇಲೆ... ಮತ್ತೆ
    ಮಳೆ ಬರಬಾರದೇ ಎಂದು
    ನಾ ಕಾಯುತ್ತಾ.... ನಿಂತೆ..!!ಬಾಲ್ಯದ ಮುಗ್ದತೆಯನ್ನ ಚೆನ್ನಾಗಿ ಹೇಳಿದ್ದಿರಿ...
    ಮಳೆ ಹನಿಯ ಒ೦ದೊ೦ದು ಬಿ೦ದುವನ್ನು ಒಪ್ಪು ಮಾಡಿ ಕೂಡಿಸಿದ೦ತೆ ಇದೆ ನಿಮ್ಮ
    ಸು೦ದರ ಸಾಲುಗಳು ..

    ReplyDelete
  22. ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ ನೆನಪಾಯಿತು

    ReplyDelete
  23. ನಾವು ಚಿಕ್ಕವರಿದ್ದಾಗ ಮಳೆ ಬಂತೆಂದರೆ ಸಾಕು ತುಂಬಾ ಖುಷಿ ಪಡ್ತಾ ಇರ್ತೀವಿ. ಅಮ್ಮನ ಹತ್ತಿರ ಬೈಸಿಕೊಂಡಾದರೂ ಸರಿ ಮಳೆಯಲ್ಲಿ ನೆನೆಯುತ್ತೇವೆ.. ಹಾಗೂ ಕುಣಿಯುತ್ತೇವೆ. ಆದರೆ ದೊಡ್ಡವರಾಗುತ್ತಾ ಅದೇ ಮಳೆ ಬಂದಾಗ ಬೇಸರಿಸಿಕೊಳ್ಳುತ್ತೇವೆ.. "ಥೂ.. ಹಾಳಾದ ಮಳೆ ಈಗಲೇ ಬರಬೇಕೆ.." ಎಂದೆಲ್ಲಾ ಗೊಣಗುತ್ತೇವೆ. ಹಾಗೇ ಗೊಣಗುತ್ತಾ ಗೊಣಗುತ್ತಾ ನಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರೆ, ನಮಗೂ ಕೂಡ ಮಳೆಯ ಕೆಸರಲ್ಲಿ ಆಡಬೇಕು ಎನಿಸುತ್ತೆ, ಮತ್ತೆ ಮಳೆ ಬರಬಾರದೇ ಎನಿಸುತ್ತದೆ. ಎಂಥ ಮನಸ್ಸನು ಕರಗಿಸುವ ಶಕ್ತಿ ಮಳೆಗಿದೆ ಎಂದು ಹೇಳುವ ಪ್ರಯತ್ನ. ಧನ್ಯವಾದಗಳು.. Ravi Murnad

    ReplyDelete
  24. ಮಳೆ ನಂತರ ಮಣ್ಣಿನ ವಾಸನೆಯಲ್ಲಿ ಮನದನ್ನೆಯ ನೆನೆಯುತ್ತಿದ್ದರೆ ಅದರ ಮತ್ತು ಗಮ್ಮತ್ತು. ದನ್ಯವಾದಗಳು ಗೆಳೆಯ Prasad V Murthy

    ReplyDelete
  25. ‎Sindhu Bhat.. ರವರೇ.. ಬಾಲ್ಯದಲ್ಲಿ ನಾವುಗಳು ಕೆಸರಲ್ಲಿ ಆಡುತ್ತೇವೆ, ಮಳೆಯಲ್ಲಿ ಕುಣಿದು, ನೆನೆದು, ಅಮ್ಮನ ಬೈಗುಳದೊಂದಿಗೆ, ನೆನೆದ ತಲೆ ಒರೆಸುವ ಅಮ್ಮನ ಬೆಚ್ಚನೆಯ ಪ್ರೀತಿಗೆ ಸೋತಿದ್ದೇವೆ. ಹಾಗೇ ದೊಡ್ಡವರಾದ ಮೇಲೂ ನಮಗೆ ಆ ಕೆಸರಿನಲಿ ಆಡಬೇಕೆಂಬ ಆಸೆ ಬಂದಾಗ ಕಂಡವರು ನಕ್ಕಾರು ಎಂದು ಸುಮ್ಮನೆ ನಿಂತೆ ಎಂದು ಇಲ್ಲಿ ನಾನು ಹೇಳಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸಿಂಧು.

    ReplyDelete
  26. ತುಂಬಾ ಸೊಗಸಾದ ಹಾಡು ನೆನಪಾದಂತಿದೆ. ಧನ್ಯವಾದಗಳು ಪವನ್.. Pavan Harithasa

    ReplyDelete
  27. ಮಲೆನಾಡ ವನಸಿರಿಯಂತೆ,
    ರೋಚಕ ಹೆಣ್ಣಿನ ಚೆಲುವು. ಈ ಸಾಲುಗಳು ತುಂಬಾ ಚನ್ನಾಗಿವೆ ಮಲೆನಾಡ ಹಸಿರು ಸಿರಿಯನ್ನು ಹೆಣ್ಣಿಗೆ ಹೋಲಿಸಿದ್ದು ತುಂಬಾ ಚನ್ನಾಗಿದೆ ............

    ReplyDelete
  28. ಮಲೆನಾಡು ಹಸಿರು ಕೂಡ ಹೆಣ್ಣಿನ ಚೆಲುವಿನಷ್ಟೆ ಚೆಂದ.. ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುತ್ತೆ ಅಲ್ವಾ ಸುಜಾತಕ್ಕ.. Sujatha Vishwanath

    ReplyDelete
  29. wah wah wah dear.

    ReplyDelete