Wednesday, April 6, 2011

ಈ ಸಂಜೆಯಲಿ..

ಅದೆಂತದೋ ಮೌನವಿತ್ತು
ನನಲ್ಲಿ, ಈ ದಿನ ಸಂಜೆಯಲಿ,
ಮನಸು ಸರಿಯಿರಲಿಲ್ಲ,
ಕಾರಣವೂ ತಿಳಿದಿರಲಿಲ್ಲ.
ಗೆಳೆಯರ ಜೊತೆ ಹೊರಟಿದ್ದೆ,
ಕಾರಣವಿರದೆ, ಕಾಡುತ್ತಿದ್ದ ಮೌನದಲಿ.

ಎಲ್ಲರ ಒತ್ತಾಯಕ್ಕಾಗಿ,
ದೋಣಿಯ ಏರಿ ಕುಳಿತೆ,
ಆಕಾಶವೆಲ್ಲ ಬಂಗಾರದಂತೆ
ಹೊಳೆಯುತ್ತಿತ್ತು, ರವಿಕಿರಣದಿಂದ.
ಬಲು ನಿಧಾನವಾಗಿ ಬರುತ್ತಿತ್ತು,
ಆ ನೀರಿನಲೆಗಳು...ಚೆಂದದಿಂದ

ನನಗೆ ತಿಳಿಯದೇ ನಾನು,
ಅಲೆಗಳ ಜೊತೆ ಕೈಸೇರಿಸಿದೆ.
ಅಷ್ಟೂ ಹೊತ್ತು ಕಾಡಿದ್ದ ಮೌನ,
ದೂರವಾಯ್ತು, ನನಗೂ ಗೊತ್ತಿಲ್ಲದೇ..
ಅದ್ಬುತ ಕ್ಷಣಗಳೋ, ಏನೋ,
ನನ್ನ ಮನ ಸೋತು ನೀರಾಗಿದೆ.

ತುಂಬಾ ಉಲ್ಲಾಸದಿಂದ
ಚೀರಾಡುತ್ತಿದ್ದೆ ಮಗುವಿನ ಹಾಗೇ,
ಈ ಸಂಜೆಗಿದು ಎಂಥಾ ಶಕ್ತಿ,
ನೋವೆಲ್ಲ ಸೆಳೆವುದು ಸೂಜಿಗಲ್ಲಿನ ಹಾಗೆ,
ಓ ದೇವರೇ.., ಈ ಸಂಭ್ರಮ,
ಸಂತಸ ಸದಾ ಇರಬಾರದೆ ಹೀಗೆ..

32 comments:

  1. thumba chenna gidhe yellarigu intha anubava kanditha agirathe,

    chennagidhe

    ReplyDelete
  2. raghavendra
    sooperb ri

    ReplyDelete
  3. awesome agi ide, hats off nimge nd nim kavanage

    ReplyDelete
  4. very nice, tumba channagidhe, keep it up

    ReplyDelete
  5. Thanks.... Padmavathi, Sathish, Yashaswini and Manu

    ReplyDelete
  6. antharalatha pisumaathu bahirangadi horahommide aksharagala rupadalli.thumba chennagive

    ReplyDelete
  7. prakruti manusyana manada duguda maresi maguvaagisuva maantrikateyannu hondiruvadu adannu sundaravaagi saralavaagi heliddiri

    ReplyDelete
  8. ಪುಣ್ಯವಂತ ನೀವು ಗೆಳೆಯ. ಇಂತಹ ಸಂಭ್ರಮಗಳಿಂದಲೇ ಮನವೂ ಪ್ರಫುಲ್ಲ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  9. Banavasi SomashekarMarch 25, 2012 at 11:40 PM

    ಸೊಗಸಾಗಿದೆ ಗೆಳೆಯರೇ ಈ ಕವಿತೆ.ನಿಮ್ಮ ರಚನಾ ಶೈಲಿ ಅತ್ಯಂತ ಕೌತುಕ.ಪ್ರತಿಯೊಬ್ಬರ ಆಸೆಗಳೂ ನನಸುಗೊಂಡು ಸಂತಸದ ಹೊನಲು ಹರಿಯುವಂತಾದರೆ ಬದುಕೆಷ್ಟು ಮಧುರ?

    ReplyDelete
  10. ಕವಿತೆಯನ್ನು ಇಷ್ಟಪಟ್ಟ ಎಲ್ಲಾ ಗೆಳೆಯ ಗೆಳತಿಯರಿಗೂ .. ಧನ್ಯವಾದಗಳು

    ReplyDelete
  11. ಪ್ರಫುಲ್ಲ ಭಾವಸಿಂಚನ.. ಶುಭವಾಗಲಿ :)

    ReplyDelete
  12. ಸಂಜೆಯ ಸಮಯ ಎಂತಹುದೇ ಭಾವನೆಗಳಿಗೆ ಮನವ ಹರಿಬಿಡುವ ನೈಸರ್ಗಿಕ ಗುಣ ಹೊಂದಿದೆ.. ಚೆನ್ನಾಗಿದೆ..

    ReplyDelete
  13. Vasanth EshwaragereMarch 25, 2012 at 11:41 PM

    tumbha chennagide brother kavana.... i lk.....

    ReplyDelete
  14. Tumba chenagide ... prati shabhadvu hosa artha nididavu .. very beautiful line ..

    ReplyDelete
  15. sUpErB GrEaT 1

    ReplyDelete
  16. ವಾವ್, ರಾಘಣ್ಣ ನಿಮಗೆ ನೀವೆ ಸಾಟಿ, ಪ್ರಕೃಉತಿಯ ವರ್ಣನೆಯ ಜೊತೆಗೆ ನಿಮ್ಮ ಮನಸಿನ ಮುಗ್ಧತನವನ್ನು ಬರೆದಿದ್ದೀರ ಮುಂದುವರೆಯಲಿ ನಿಮ್ಮ ಪಯಣ :)

    ReplyDelete
  17. artha barithavadaaaa saalugalu ...........prakruthiya varnisalu heshtu pada idaru saaladu

    ReplyDelete
  18. ನಿಮ್ಮ ಅಕ್ಕರೆಯ ಸಹಕಾರ ಇರುವಾಗ ನನ್ನ ಪಯಣ ಸಾಗುತ್ತಲೇ ಇರುವುದು. ಧನ್ಯವಾದಗಳು ಮಿತ್ರ Pavan Harithasa

    ReplyDelete
  19. ಧನ್ಯವಾದಗಳು Gayathri Uma ಮೇಡಂ..

    ReplyDelete
  20. EKAANTAVU KELAVOMME,,DIVYTEYANNU NIDUTTADE,,,ADU NIMM KAVANADALLIDE,,,,GOOD LINES,,

    ReplyDelete
  21. Thanks for your comment Ramesh Kulkarni

    ReplyDelete
  22. ಇದು ಇನ್ನೊಮ್ಮೆ ಬರೆದ ಕವಿತೆಯೇ..ಎಲ್ಲೋ ಓದಿದ ನೆನಪು..

    ReplyDelete
  23. ಇಲ್ಲ ಹಳೆಯ ಕವಿತೆಯಿದು. ನನ್ನ "ಕಣ್ಣ ಹನಿ" ಕವನ ಸಂಕಲನದಲ್ಲಿ ನೋಡಿರುತ್ತೀರಿ ಎನಿಸುತ್ತೆ ಸೀಮಾ ಮೇಡಂ. ನನ್ನ ಈ ಕವಿತೆ ನಿಮ್ಮ ನೆನಪಿನಲ್ಲಿದೆ ಎಂದಾದರೆ ಮನಸಿನೊಳಗಿನಾಳಕ್ಕೆ ಕವಿತೆ ಭಾವ ಸಾರ ಪಸರಿಸಿದೆ ಎಂದಾಯ್ತು. ನಿಮಗೆ ಧನ್ಯವಾದಗಳು Seema Burde ರವರೇ...

    ReplyDelete
  24. ಸುಲಲಿತ ನಿರೂಪಣ ಶೈಲಿಯಲ್ಲಿ ಉತ್ತಮ ಆಶಯ ಹೊತ್ತ ಭಾವ ಹೂರಣ. ಮತ್ತದೇ ಹಳೆಯ ಭಾವವೊಂದನು ಕನ್ನಡ ಬ್ಲಾಗ್ ನಲಿ ಪ್ರಕಟಿಸಿದಕ್ಕೆ.

    ReplyDelete
  25. ಧನ್ಯವಾದಗಳು ಪುಷ್ಪಣ್ಣ... Pushparaj Chauta

    ReplyDelete
  26. ಹೌದು ಸಂಜೆಯ ಶಕ್ತಿಯೇ ಅಂತಹದು.. ಭಾವದ ಜಿನುಗು ಮಳೆ ಈ ಕವಿತೆ.. ಶುಭವಾಗಲಿ :)

    ReplyDelete
  27. ಧನ್ಯವಾದಗಳು ಮಿತ್ರ.... Paresh Saraf

    ReplyDelete