ನೋವೆ,
ಅದೆಲ್ಲಿ ಅಡಗಿರುವೆ,
ಅದು ಹೇಗೆ ಬಂದಿರುವೆ,
ಮನದ
ಸಂತಸವನ್ನೆಲ್ಲಾ ನುಂಗಿ
ಹೀಗೇಕೆ ಕಾಡುವೆ.
ತೃಣಮಾತ್ರದಿ ಬಂದು,
ಬೃಹದಾಕಾರಾದಿ ಬೆಳೆದು,
ಕ್ಷಣಕ್ಷಣವೂ ಬಿಡದೇ
ಮನ ನೋಯಿಸುವೆ ಏಕೆ?
ಜೀವನ
ಸಾಕ್ಷಾತ್ಕಾರಕ್ಕಾಗಿ
ಹಗಲಿರುಳು ಕಂಡ
ಸಾವಿರ ಕನಸುಗಳನು
ಕ್ಷಣಮಾತ್ರದಲಿ
ನೀ ಮರೆಸುವೆ ಏಕೆ..?
ತಂದೆ ಮಮತೆಯ ನೋವು,
ತಾಯಿ ಕರುಳಿನ ನೋವು,
ಹೆಂಡತಿ ಕಣ್ಣೀರಿನ ನೋವು,
ಪ್ರೇಮಿಗಳ ವಿರಹದ ನೋವು,
ಆಪ್ತರ ಅಗಲುವಿಕೆಯ ನೋವು,
ಒಂದಲ್ಲ, ಎರಡಲ್ಲ,
ನೂರು ಬಗೆಯಾಗಿ ಬರುವೆ,
ನನ್ನಂತೆಯೇ
ನಲಿವ ಮನಸುಗಳ
ಹಿಡಿ ನೆಮ್ಮದಿಯನು
ಗಾಳಿಗೆ ತೂರುವೇ ಏಕೆ?
ನಿನ್ನನು ಪ್ರತಿದಿನ
ಅನುಭವಿಸುವುದಕ್ಕಿಂತ,
ಒಮ್ಮೆಲೆ ಸಾವು
ಬರಬಾರದೇ? ಎಂದು
ಕಾತರದಿ ಕಾಯುವಂತೆ
ನೀ ಮಾಡುವೆ ಏಕೆ..?
ಇಷ್ಟೆಲ್ಲಾ ಇಡಿಯಾಗಿ
ನೀ ಕಾಡುತ್ತಿದ್ದಾಗ,
ನನ್ನ ಅಂತರಂಗದಲ್ಲೆಲ್ಲೋ,
ಮೂಡಿದ ಆಶಾಭಾವ
ನನಗೆ ಹೇಳಿದ್ದೇನು ಗೊತ್ತಾ..?
"ಇದೆಲ್ಲಾ ನಿಂಗೆ ಯಾವ ಲೆಕ್ಕ..?"
Dear Brother, Sorry to saying this... You have wrote many poems(kavana) But in this Blag there is no pure words... try wrote kavana in pure kannada.. not in village language......
ReplyDeleteUr paapu
Hi.... Arjun....
ReplyDeleteThank u for your comments.
Actually.... some poems written in Rural langauge. because of Its well understanding... and expressive language of some people like.... FORMER waiting for RAIN
ಕವನ ತುಂಬಾ ಚನ್ನಾಗಿದೆ ಗೆಳಯ
ReplyDeleteಇನ್ನು ಒಳ್ಳೊಳ್ಳೆ ಕವನಗಳು ನೀನು ಬರೀಬೇಕು ಅಂಥಾ ನಾನು ಹಾರೈಸುತಿನೆ ಗೆಳಯ
ಬೆಸ್ಟ್ ಆಫ್ ಲಕ್ ಕುಚುಕು
hai
ReplyDeletevery nice keep it up
you shuld write many more kavana i ll waiting for new kavana dont forget dat ok
snehapriya.....
Awesome..
ReplyDeleteU Rockzzzzzzzzzz emotionally...
All the best for your new kavana's
ಚೆನ್ನಾಗಿದೆ.
ReplyDeleteಪ್ರಾಸವಿಟ್ಟು, ಗೇಯತೆ ಕೊಟ್ಟು ಬರೆಯುವುದನ್ನ ಪ್ರಯತ್ನಿಸಿ :)
ಶುಭಾಶಯಗಳು..
ನೋವಿಗಿಂತ ನಲಿವೇ ಜಾಸ್ತಿ ಈ ನಮ್ಮ ಬಾಳಿನಲಿ , ನೋವು ಉಣ್ಣದ ಜೀವವೆಲ್ಲಿದೆ , ನೋವಿನ ಸಾಲುಗಳು ತುಂಬಾ ಚನ್ನಾಗಿ ಮೂಡಿಬಂದಿವೆ..
ReplyDeleteSimply superb.. Keep posting..
ReplyDeleteFew thoughts are excellent for it be explaining the minute of details..