ಬಾರೋ ಮಳೆರಾಯ
ನಿಂಗಾಗಿ ಕಾದುಕಾದು
ಭೂತಾಯಿ ಒಡಲು ಹಿಂಗೋಯ್ತು.
ಮುಂಜಾನೆ ಹೊತ್ನಾಗೆ,
ನೇಗಿಲ ಹಿಡ್ಕಂಡು ಹೊಂಟು,
ಉಳುಮೆಯ ಮಾಡಿ
ಮೂಡಿದ್ದ ಹಚ್ಚಹಸಿರ ಪೈರು
ನಿಂಗಾಗಿ ಕಾದು ಕಾದು
ಒಣಗಿಹೋಯ್ತಲ್ಲೋ ಮಳೆರಾಯ.
ಹಟ್ಟಿಯಾಗ ಹಿಟ್ಟಿಲ್ಲ.,
ತೋಳ್ನಾಗ ಕಸುವಿಲ್ಲ..!
ನನ್ನ ಕಂದಮ್ಮಗೆ
ಹಸಿವ ಹಿಂಗಿಸಲು
ನನ್ನಾಕೆ ಎದೆಹಾಲು ಬತ್ತೈತೋ..!
ಆ ಗೋಳಾ ನೋಡಿ
ಕಣ್ಣಾಗೆ ನೀರು ಹರಿದೈತೋ.
ಬಡತನದಿ ಬೇಯ್ವ
ನಮಗೆ, ಗೌಡ್ತಿಯ ಸಾಲ,
ಈಸೊಂದು ನೋವ ನುಂಗಿ
ಕಳೆಯೋದು ಹ್ಯಾಂಗ ಕಾಲ,
ನೀನೊಮ್ಮೆ ಬಂದಾರೆ..
ಕೆರೆನೀರ ಕುಡಿದಾದ್ರು
ಜೀವ ಉಳಿಸ್ಕೋತೀವೋ..!
ನೀನೊಮ್ಮೆ
ಬಂದು ಬಿಡೋ ಮಳೆರಾಯ
ನನ್ನ ಎದೆ ತಂಪಾಯ್ತದೋ,
ಬಾರೋ ಮಳೆರಾಯ
ನಿಂಗಾಗಿ ನಾ ಕಾದುಕಾದು
ಸಾಕಾಯ್ತೋ.. ಈ ಜೀವಕ
ಬ್ಯಾಸರ ಬಂದೈತೋ..!
all the BEST my DR anna
ReplyDeletenimma prithiya
Nandi j. hoovinahole
ನಮ್ಮ ಭಾರತೀಯ ರೈತನ ಬವಣೆಯನ್ನು ಮತ್ತು ಅವನ ಅಳಿವು -ಉಳಿವಿನಲ್ಲಿನ ಮಳೆಯ ಪಾತ್ರವನ್ನ ಕಣ್ಣಿಗೆ ರಾಚುವ ಹಾಗೆ ಚಿತ್ರಿಸಿದ್ದಿರಾ...
ReplyDeleteಮಳೆ ಸಾಕಷ್ಟು ಬರಲಿ ರೈತ ಗಟ್ಟಿಯಾಗಲಿ ಎ೦ದು ಹಾರೈಸೋಣ.
ನಮ್ಮ ಭಾರತೀಯ ರೈತನ ಬವಣೆಯನ್ನು ಮತ್ತು ಅವನ ಅಳಿವು -ಉಳಿವಿನಲ್ಲಿನ ಮಳೆಯ ಪಾತ್ರವನ್ನ ಕಣ್ಣಿಗೆ ರಾಚುವ ಹಾಗೆ ಚಿತ್ರಿಸಿದ್ದಿರಾ...
ReplyDeleteಮಳೆ ಸಾಕಷ್ಟು ಬರಲಿ ರೈತ ಗಟ್ಟಿಯಾಗಲಿ ಎ೦ದು ಹಾರೈಸೋಣ
ಪ್ರಹ್ಲಾದ್
ನನ್ನಿವಾಳ
thank u ... seeetharam sir..
ReplyDeleteand Prahlad, nandi..
I also wish to wait for coming rain to solve.. FORMER's problem.. and nation problem
raghu
ReplyDeletetumba channagi bardidira
male illade enu saha illa
realy wonderfull.....
emotionally this is good. what are we doing to over come. sooner no land will be available for ploughing and ofcourse with this kind pollution no rain. it will be only chemical raining and living will be hell
ReplyDeleteNIJAVAGLU NANU MATTE HALLIYA VATHA VARANA NANNA KANNA MUNDE BANDA HAGE BAREDDI DIRA NIJAVAGLU NANU MATTE NANNA HALLI GE HOGI ALLIYA VATHA VARNA NA SAVI BEKENBA ASE AGUTHIDDE E KAVANA ODUTTU ODUTTU NANNA BALYA NINAPE BARUTTE RAGHAVENDRA NIVU IDE THARAHADA KAVANA BARI BEKEMBA ASE NANNADU.....
ReplyDeleteತುಂಬಾ ಸುಂದರವಾಗಿ ಬರೆದಿದ್ದೀರಿ ಮಾನ್ಯರೆ. ಗ್ರಾಮ್ಯದ ಸೊಗಡು ಕಂಡು ಸಂತಸಗೊಂಡೆ. ನಿಮಗೆ ಶುಭವಾಗಲಿ.
ReplyDeleteಮನ ಕಲುಕುವ ಈ ಕವನವನ್ನು ಗ್ರಾಮೀಣ ಸೊಬಗು ಮತ್ತು ಅದರ ಕಷ್ಟಗಳನ್ನು ಅರಿತವರಿಂದ ಮಾತ್ರ ಬರೆಯಲು ಸಾಧ್ಯ. ಸುಮಾರು ಐದು ವರ್ಷ ಹಿಂದಿನಾದ್ದದ್ದಾದರೂ ಇಂದಿಗೂ ಈ ಸಾಲುಗಳು ರೈತರಿಗೆ ಅನ್ವಯ. ನಿಮಗೆ ಶುಭವಾಗಲಿ
ReplyDelete