Friday, August 6, 2010

ಭಿಕ್ಷುಕನು ನಾನಲ್ಲ..!


ಭಿಕ್ಷುಕನು ನಾನಲ್ಲ,
ಇವರಂಥಾ ಭಿಕ್ಷುಕನು ನಾನಲ್ಲ..!

ಬಡವರ ಹೊಟ್ಟೆಯನು
ಬಡಿದು, ದಿನದ ಮಾಮೂಲು
ಕೇಳುವ ಪೋಲೀಸು ನಾನಲ್ಲ.
ಈಗಲೋ, ಆಗಲೋ
ಸಾಯುವ ರೋಗಿಯನು ಬಿಡದೇ,
ರಕ್ತ ಹೀರುವ ಡಾಕ್ಟರೂ ನಾನಲ್ಲ.

ಪ್ರಜಾಹಿತವ ಬದಿಗೊತ್ತಿ,
ಕೋಟಿಕೋಟಿ ಹಣ ಕೊಳ್ಳೆ ಹೊಡೆವ,
ಡೊಳ್ಳುಹೊಟ್ಟೆ ರಾಜಕಾರಣಿ ನಾನಲ್ಲ.
ಸಾವಿರಾರು ರೂಪಾಯಿ
ಪಗಾರ ಬಂದ್ರೂ, ಲಂಚಕ್ಕಾಗಿ
ಕೈಯೊಡ್ಡೋ, ಸರ್ಕಾರಿ ನೌಕರ ನಾನಲ್ಲ.

ಬಿಸಿಲು ಧೂಳಲ್ಲಿ ಕೂತು,
ಬೇಡಿ ಪಡೆದ ಚಿಲ್ಲರೆ ಕಾಸು,
ಸಾಕು ನನ್ ಹೊಟ್ಟೆ ತಣ್ಣಗಿಡಲು.
ಇರುಳೆಲ್ಲಾ ಸಿಹಿಗನಸು,
ಕಣ್ಗಳಲಿ ಸವಿ ನಿದಿರೆ ಸೊಗಸು,
ನಿಜ, ಭಿಕ್ಷುಕನು ನಾನಲ್ಲ,
ಇವರಂಥಾ ಭಿಕ್ಷುಕನು ನಾನಲ್ಲ...!

23 comments:

  1. nija ragavendra avare avrella dodda bikshukare

    ReplyDelete
  2. ತುಂಬಾ ಚೆನ್ನಾಗಿ ಬಿಕ್ಷುಕನ ಮುಖಾಂತರ ವ್ಯವಸ್ಥೆಯ ಅಣುಕು ಮಾಡಿದಿರಾ....
    ಬಹಳ ಇಷ್ಟವಾಯಿತು.

    ReplyDelete
  3. NIJAVAGLU RAGHU NIVU HELIDA SATYA GALU E SATYA NA YELLA JANATHE GE GOTTIRUVA SATYA NE ADRE YARU KUDA ADARA KADE GAMANA KODALLA NIMMA KAVITHE INDA SWALPA ADARU EFFECT AGUTTE NICE JAAGO GRAHAK JAAGOO RAGHU REALLY HATS OF YOU SIR...

    ReplyDelete
  4. Thnx seetharam sir..

    ಸಮಾಜದ ವ್ಯವಸ್ಥೆ ಈಚೆಗಂತೂ ತುಂಬಾ ಹದಗೆಡುತಿದೆ ಅಲ್ವಾ..
    ಅವರೆಲ್ಲಾ ಸಮಾಜ ಸೇವಕರಲ್ಲ.. ನಿಜ ಭಿಕ್ಷುಕರು.

    ReplyDelete
  5. ಡಿಯರ್ ರಾಘು ನಮಸ್ತೆ, ನಿಮ್ಮ ಬ್ಲಾಗ್ ಲೋಕದ ಭಾವ ಯಾತ್ರೆಯನ್ನೂ ಈಗಸ್ಟೆ ನೋಡಿ ಬಂದೆ. ಅದ್ಬುತ, ಅರ್ಥಪೂರ್ಣ, ವಸ್ತುನಿಸ್ಟ, ವಾಸ್ತವಿಕ ಇವಿಸ್ಟು ನಿಮ್ಮ ಕವಿತೆಗಳ ಬಗೆಗೆ ನನಗನಿಸಿದ್ದು. ನಿಮ್ಮೆಲ್ಲ ಕವಿತೆಗಳಲ್ಲಿ ಪ್ರೀತಿ ಇದೆ, ಜಾಗೃತಿ, ಕ್ರಾಂತಿ ಯಾ ಕಿಡಿಗಳಿವೆ. ನಿಮ್ಮ " ಬಿಕ್ಹುಕ ನಾನಲ್ಲ " ಅನ್ನುವ ಕವಿತೆ ಈ ಸಮಾಜದ ವ್ಯವಸ್ಥೆಯ ಕನ್ನಡಿ ಎಂದರೆ ತಪ್ಪಾಗಲಾರದು. ಅಭಿನಂದನೆಗಳು ನಿಮ್ಮ ಆಲೋಚನೆಗಳಿಗೆ, ಅಭಿವ್ಯಕ್ತಿಗಳಿಗೆ. ಶುಬವಾಗಲಿ ನಿಮ್ಮ ಕಾವ್ಯ ಕೃಷಿಗೆ.


    ಸ್ನೇಹ ಅಮರವಾಗಲಿ..

    "ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ"

    ನಿಮ್ಮ

    ಲಿಂಗೇಶ್ ಹುಣಸೂರು,
    ಬಿಂದುವಿನಿಂದ ಅನಂತದೆಡೆಗೆ....

    ನನ್ನ ಭಾವ ಲೋಕಕ್ಕೆ ಒಮ್ಮೆ ಬನ್ನಿ, ತಮಗಿದೋ ಸವಿನಯ ಆಮಂತ್ರಣ....

    ReplyDelete
  6. ಬಡವರ ಹೊಟ್ಟೆಯನು
    ಬಡಿದು, ದಿನದ ಮಾಮೂಲು
    ಕೇಳುವ ಪೋಲೀಸು ನಾನಲ್ಲ.
    ಈಗಲೋ, ಆಗಲೋ
    ಸಾಯುವ ರೋಗಿಯನು ಬಿಡದೇ,
    ರಕ್ತ ಹೀರುವ ಡಾಕ್ಟರೂ ನಾನಲ್ಲ.!!

    ಗೆಳೆಯ ತುಂಬಾ ಚೆನ್ನಾಗಿದೆ ಮನಸ್ಸಿಗೆ ಮುಟ್ಟುವಾ ಹಾಗೆ ಪಗಳ ಜೋಡಿಸಿದ್ದಿರ !
    ನನಗೆ ತುಂಬಾ ಇಷ್ಟವಾಯಿತು

    ReplyDelete
  7. ತುಂಬ ಚನ್ನಾಗಿದೆ ಕವನದಲ್ಲೇ ಈಗಿನ ಲಂಚಾವತಾರ ತೋರಿರೋ ರೀತಿ .

    ReplyDelete
  8. ಎಂತಹ ಮಾತುಗಳು.
    ಪ್ರತಿಮಾತಿನಲ್ಲೂ
    ಚಾಟಿಯೇಟು, ಇದ್ದರೆ
    ನಾಚಿಕೆ, ಬಿಡಬೇಕು ಸೀಟು.

    ತುಂಬಾ ಚೆನ್ನಾಗಿ ಬರೆದಿದ್ದೀರಿ. ಬಾಷೆಯ ಹಿಡಿತ ಚೆನ್ನಾಗಿದೆ. ಕನ್ನಡವ ಕಾಪಾಡುವವರು ಇನ್ನೂ ಇದ್ದಾರೆ ಎಂದು ಬಹಳ ಸಂತೋಷ.

    ReplyDelete
  9. ವಾಸ್ತವತೆಯನ್ನು ತುಂಬಾ ವಿಡಂಬನೆಯಾಗಿ ಕವನದಲ್ಲಿ ಎಳೆದು ತಂದಿದಿರಾ ,

    ReplyDelete
  10. ನೈಜ ಸತ್ಯ...

    ReplyDelete
  11. ಅದ್ಭುತ ರಾಘವೇಂದ್ರಣ್ಣ. ಕವಿತೆ ತುಂಬಾ ಸೊಗಸಾಗಿದೆ. ನಿಮ್ಮ ಮಾತು ನೂರಕ್ಕೆ ನೂರು ನಿಜ. ಸಮಾಜದಲ್ಲಿ ಸಾಂಕ್ರಾಮಿಕ ರೋಗದಂತಿರುವ ಇವರೆಲ್ಲಾ ನಿಜವಾದ ಭಿಕ್ಷುಕರು. ಬಡವರ, ಕೆಲವರ್ಗದ ರಕ್ತಹೀರುವ ನಿಜವಾದ ಭಿಕ್ಷುಕರು.

    ReplyDelete
  12. ಕವಿತೆಯಲ್ಲಿನ ಪ್ರಢಿಮೆ ಕಂಡು ಬೆರಗಾದೆ ರಾಘವೇಂದ್ರರೆ.. ಭಿಕ್ಷುಕನು ನಾನಲ್ಲ ಎಂದು ವಿಡಂಬನಾತ್ಮಕವಾಗಿ ಈ ಭ್ರಷ್ಟರ ಬಣ್ಣಗಳನ್ನು ಬಟಾಬಯಲು ಮಾಡುತ್ತದೆ ನಿಮ್ಮ ಕವಿತೆ.. ಗಂಜಿಗೆ ಕಾಸೊಂಚಿ ಸುಖಜೀವನ ಸಾಗಿಸುವುದೇ ಲೇಸು ಈ ಭ್ರಷ್ಟರ ಜೀವನದಂತಹ ಹೇಸಿಗೆ ಐಶಾರಾಮಿ ಜೀವನವನ್ನು ಸವಿಯುವುದಕ್ಕಿಂತ.. ಕವಿತೆ ತುಂಬಾ ಹಿಡಿಸಿತು..:))) ಭೇಷ್..

    ReplyDelete
  13. ತುಂಬಾ ಚೆನ್ನಾಗಿದೆ :)

    ReplyDelete
  14. ತುಂಬಾ ಚೆನ್ನಾಗಿದೆ ಗೆಳೆಯ.. ಹಸುಗಳ ಸೋಗಿನಲ್ಲಿ ಬಂದ ಹುಲಿಗಳು., ನಿಮ್ಮ ಈ ಕಾವ್ಯಧಾರೆಯಿಂದ ತೋಯ್ದು., ಬಣ್ಣ ಕರಗಿ., ನಿಜ ಸ್ವರೂಪ ಜಗದ ಕಣ್ಣಿನ ಮುಂದೆ ಬಂದಿದೆ.. ಭಿನಂದನೆಗಳು.. ನಿಮ್ಮ ಕಾವ್ಯ ಲಹರಿ ಹೀಗೆ ಅಬ್ಬರಿಸುತ್ತಿರಲಿ.. :))

    ReplyDelete
  15. ವಾಸ್ತವತೆಗೆ ಕನ್ನಡಿ ಹಿಡಿದಿದ್ದೀರಿ ಶುಭವಾ

    ReplyDelete
  16. ತಾವು ಮತ್ತು ತಮ್ಮ ಕುತುಮ್ಬವೆಲ್ಲವೂ ಹೊಟ್ಟೆ ತುಂಬಾ ಊಟ ಮಾಡುವಷ್ಟು ಸಂಬಳ ಬಂದರೂ ಈ ಸಮಾಜದ ಪುಡಿಗಾಸಿಗಾಗಿ ಅದ್ಯಾಕೆ ಕೈ ಒಡ್ಡುತ್ತಾರೋ? ಇವರೇ ಅಲ್ಲವೇ ನಿಜವಾದ ಭಿಕ್ಷುಕರು. ಧನ್ಯವಾದಗಳು Prasad V Murthy

    ReplyDelete
  17. ಧನ್ಯವಾದಗಳು Inayath Kadkol & Seema Burde

    ReplyDelete
  18. ಹೌದಲ್ಲವೇ.. ? ಅವರೇ ತಾನೇ ನಿಜವಾದ ಭಿಕ್ಷುಕರು. ಧನ್ಯವಾದಗಳು ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ Abdul Satthar Kodagu

    ReplyDelete
  19. ಧನ್ಯವಾದಗಳು ಗೆಳೆಯ Pramod Pammi

    ReplyDelete