Friday, June 3, 2011

ಹಚ್ಚಹಸಿರ ಪರಿಸರ.


ಆಹಾ ಎಲ್ಲೆಲ್ಲೂ ನೋಡಿದರೂ,
ಮನಕೆ ಮುದನೀಡುವ ಹಚ್ಚಹಸಿರು..
ಇದೆ ತಾನೇ, ಪರಮಾನಂದಕೆ ತವರು.

ಎತ್ತರದ ಮರಗಳ ಹೊದಿಕೆಯ
ನುಸುಳಿ ಬರುತಿದೆ ರವಿಕಿರಣಗಳು,
ಆ ಹುಲ್ಲು ಹಾಸಿಗೆಯ ತಾಕಿ,
ಕರಗಿಸುತೆ ಮಂಜಿನ ಇಬ್ಬನಿಯ ಸಾಲು.
ಅಲ್ಲಲ್ಲಿ.. ಮರೆಯಲ್ಲಿ.. ನಸುನಗುತಿವೆ,
ಕಂಪು ಸೂಸುವ ಕಾಡಿನ ಸುಮಗಳು.
ಆ ಸುಮಗಳ ಕಂಪಿನ ಕರೆಗೆ ಏನೋ,
ಎಲ್ಲಿಂದಲೋ ಬಂದವು ಬಣ್ಣದ ಚಿಟ್ಟೆಗಳು..

ಇಂದಿನ ಕಾಂಕ್ರೀಟ್ ಕಾಡಿನಲ್ಲಿ
ಮರೆಯಾಗುತಿದೆ ಈ ಸೊಬಗು.
ಇದು ಹೀಗೆಯೇ ಮರೆಯಾದರೇ,
ಮನುಕುಲ ಮರೆಯಾದರೇನಿಲ್ಲ ಬೆರಗು.!!
ಗೆಳೆಯರೇ ಗಿಡ-ಮರ ಬೆಳೆಸಿರಿ,
ನಮ್ಮ ಈ ಸುಂದರ ಪರಿಸರ ಉಳಿಸಿರಿ,
ನಮ್ಮ ಮುಂದಿನ ಪೀಳಿಗೆಯ,
ಬದುಕಿಗೆ ನೀವು ಬೆಳಕಾಗಿರಿ..!!!

ಇಂದು ವಿಶ್ವ ಪರಿಸರ ದಿನ,
ಪರಿಸರ ರಕ್ಷಿಸಿ, ಭೂಮಿಯ ಉಳಿಸಿ.

2 comments: