Wednesday, June 30, 2010

ಕಂದಾ...


ಮುದ್ದುಕಂದಾ,
ಅಮ್ಮಾ ಎನಬಾರದೇ..
ನೀನೊಮ್ಮೆ ಅಮ್ಮಾ ಎನಬಾರದೇ?

ಅವನ್ಯಾರು
ಜವರಾಯ, ಕದ್ದೊಯ್ಯಲು
ನಿನ್ನ ಜೀವ
ಅವನಿಗೇನಿತ್ತು.
ನಿನ್ನ ಮೇಲೆ ಹಗೆ.

ಪ್ರತಿ ಕ್ಷಣ ಕಾಡಿದ್ದೆ,
ನಿನ್ನ ತುಂಟಾಟದಿಂದ
ನೀನಲ್ಲವೇ ನನ್ನ ಜೀವ.
ನಾ ಬಾಳಲಿ ಹೇಗೆ.

ನವಮಾಸಗಳಲಿ
ನಿನ್ನನು ನೆನೆನೆನೆದು
ಖುಷಿಪಡುತ್ತಿದ್ದ ಸಮಯ,
ಸ್ವರ್ಗದ
ಬಾಗಿಲು ತೆರೆದಂತಿತ್ತು
ಈ ಭುವಿಗೆ ನಿನ್ನ
ನಾ ಕರೆತಂದ ಸಮಯ.

ಮರೆತಿದ್ದೆ
ನನ್ನೆಲ್ಲ ನೋವನ್ನು,
ಕಂಡಾಗ ನಿನ್ನ ಮೊಗವು
ಈ ಮನಸು
ನಂದನವನವಾಗಿತ್ತು
ಕಣ್ತುಂಬಿಕೊಂಡಾಗ ನಿನ್ನ ನಗುವು

ಹಾಳುಬದುಕೇ
ಬೇಡ.. ಕಂದಾ ನನಗೆ.
ಇರಲಾರೆ ನಾ.. ನಿನ್ನ ಬಿಟ್ಟು
ಕಂದಾ..
ನನ್ನ ಮುದ್ದುಕಂದಾ
ಅಮ್ಮಾ ಎನಬಾರದೇ
ನೀನೊಮ್ಮೆ ಅಮ್ಮಾಎನಬಾರದೇ..?

28 comments:

  1. all the BEST my DR anna


    nimma prithiya
    Nandi j. hoovinahole

    ReplyDelete
  2. Edu skathagi bardidira its realy nice

    ReplyDelete
  3. nimagondu nanna kadehinda all the best in your life

    ReplyDelete
  4. thanks... Nandi.. and Ibrahim patel...

    ReplyDelete
  5. ಮುಗ್ದ ಮಗುವಿನ ನಗುವನ್ನು ಕಸಿದುಕೊಂಡಿರುವ ಓ ಜವರಾಯನೆ ನಿನಗೆ ಕರುಣೆ ಇಲ್ಲವೇ?????????????
    ಮಮತೆಯಾ ಕುಡಿಯ ಕಳೆದುಕೊಂಡ ತಾಯಿಯ ಭಾವಗಳು ಕಣ್ಣಂಚಲ್ಲಿ ನೀರು ಹನಿಸುತ್ತದೆ ನಿಮ್ಮ ಭಾವುಕ ಮನಕ್ಕೆ ನಮ್ಮ ವಂದನೆಗಳು

    ReplyDelete
  6. Namasthe sir, hegiddera........ nim hosa kavana sanchike Kan-Hani thumbe chanagidhe...........

    ReplyDelete
  7. ಮನದಾಳಕ್ಕಿಳಿವ೦ತೆ ಚಿತ್ರಿಸಿದ್ದಿರಾ... ಮಗುವನ್ನ ಕಳೆದುಕೊಂಡ ಮಾತೆಯ ಮನದ ಮಾತಾ!

    ReplyDelete
  8. thns... sathish..

    and
    thnxk.. sudha..

    ReplyDelete
  9. ಕಂದನಗಲುವಿಕೆಯಲ್ಲಿ ಅಮ್ಮನ ಎದೆಯಾಳದೊಳಗೆ ತೂರಿ ಕರುಳುಕರಗಿಸುವ ಹಾಗೆ ಭಾವಬಿಂಬ. ಪದಗಳಿಲ್ಲ ನನ್ನ ಮನದಲ್ಲಿ!

    ReplyDelete
  10. ಪುತ್ರಶೋಕಂ ನಿರಂತರಂ... ಕಂದನನ್ನ ಕಳೆದುಕೊಂಡ ತಾಯಿಯ ಕರುಳಿನ ಸಂಕಟ... ಮನಸ್ಸನ್ನು ತೋಯ್ದು.. ಮೂಕವಾಗಿಸಿತು.

    ReplyDelete
  11. ಮನಸ್ಸಿಗೆ ಏನೋ ವೇದನೆ ಅನಿಸುತ್ತದೆ ತಾಯಿಯ ನೋವನ್ನು ಕಂಡಾಗ.ತುಂಬ ಚನ್ನಾಗಿ ಬರೆದಿದ್ದೀರಿ . ಮಕ್ಕಳ ಅಗಲಿಕೆಯನ್ನು ಯಾವ ತಾಯಿಯು ಸಹಿಸಲಾರಳು.

    ReplyDelete
  12. ಮೊಮ್ಮಕ್ಕಳಲಿ ಮಗನ ಮುಖ ಕಂಡು ನಗುವ ಅಳುವ ಅಮ್ಮನ ಆ ಮಿಶ್ರ ಭಾವ ನೆನಪಿಸಿದಿರಿ. ಹಿರಿಯರೊಬ್ಬರು ಹೇಳಿದ ಹಾಗೆ ನಮಗಿಂತ ಕಿರಿಯವರು ಸರಣಿ ಮುರಿದು ಏಕೆ ಮುಂದೆ ಹೋಗುತ್ತಾರೋ....

    ReplyDelete
  13. ನವಮಾಸಗಳಲಿ
    ನಿನ್ನನು ನೆನೆನೆನೆದು
    ಖುಷಿಪಡುತ್ತಿದ್ದ ಸಮಯ,
    ಸ್ವರ್ಗದ
    ಬಾಗಿಲು ತೆರೆದಂತಿತ್ತು
    ಈ ಭುವಿಗೆ ನಿನ್ನ
    ನಾ ಕರೆತಂದ ಸಮಯ.
    .............. ಮುದ್ದು ಮನೋಹರವಾದ ಭಾವ ಮಿಡಿವ ಸಾಲುಗಳು.ಇಷ್ಟವಾಯಿತು.

    ReplyDelete
  14. ನವಿರಾದ ಅಮ್ಮನ ಮಮತೆಯ ಭಾವಗಳನ್ನು ಮನಮುಟ್ಟುವಂತೆ ಕವಿತೆಯಾಗಿಸಿದ್ದೀರಿ ರಾಘವೇಂದ್ರರವರೆ.. ಮಗುವನ್ನು ಕಳೆದುಕೊಂಡು ಪರಿತಪಿಸುವ ತಾಯಿ, ತನ್ನ ಮಗುವನ್ನು ಕಾಣದೆ ಪರದಾಡುವ ಪರಿಪಾಟಲುಗಳೇ ಮನಕಲಕುವ ಕವಿತೆಯಾಗಿ ಮೂಡಿ ನಿಂತಿದೆ.. ಭೇಷ್, ಆಕೆಯ ಮನದ ದುಗುಡವನ್ನು ಹೆಕ್ಕಿ ಕವಿತೆಯಲ್ಲಿಳಿಸಿದ್ದೀರಿ, ತುಂಬಾ ಇಷ್ಟಪಟ್ಟೆ.. ಹೀಗೇ ಮುಂದುವರೆಯಲಿ ನಿಮ್ಮ ಕವನ ಯಾನ..

    ReplyDelete
  15. ನಮ್ಮ ಹೆಜ್ಜೆಯಲ್ಲಿ ಮತ್ತೊಂದು ಭಾವವನ್ನು ಮೂಡಿಸಿಕೊಂಡು ಕವಿತೆ ಬರೆಯುವುದು ಕಷ್ಟ. ಅಮ್ಮನ ಮನದಾಳದ ಸುಂದರ ಅನುಭೂತಿಯನ್ನು ಹೆಕ್ಕಿದ್ದು ಖುಷಿಯಾಯಿತು. ನಮ್ಮಮ್ಮ ನನಗೆ ಹೇಳಿದಂತಿದೆ. ಚೆನ್ನಾಗಿದೆ... ಹೀಗೆ ದಿನಕ್ಕೊಂದು ಕವಿತೆ ನಮ್ಮೊಡನೆ ಹಂಚಿಕೊಳ್ಳಿ. ಓದಿ ಮನಸ್ಸು ಹಗುರ ಮಾಡಿಕೊಳ್ಳುತ್ತೇವೆ....

    ReplyDelete
  16. ನೀವು ಹೇಳಿದ ಹಾಗೆ ಮತ್ತೊಬ್ಬರ ಭಾವವನ್ನು ಅರಿತು ಬರೆಯುವುದು ಕಷ್ಟ. ಆದರೂ ಚಿಕ್ಕ ಪ್ರಯತ್ನ ಮಾಡಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ಖಂಡಿತ ಇನ್ನೂ ಒಳ್ಳೆಯ ಕವಿತೆ ಬರೆಯಲು ಪ್ರಯತ್ನಿಸುತ್ತೇನೆ. Mohan V Kollegal

    ReplyDelete
  17. ಮಗುವನ್ನು ಕಳೆದುಕೊಂಡ ಅಮ್ಮನ ನೋವು ಯಾರಿಗೂ ಸಮಾಧಾನ ಮಾಡಲಾಗುವುದಿಲ್ಲ.. ಅಲ್ಲವೇ. ? Pushparaj Chauta

    ReplyDelete
  18. ಅಮ್ಮನ ವೇದನೆ ಬಣ್ಣಿಸಲು ಪದಗಳು ಸಿಗುವುದಿಲ್ಲ.. ಅಲ್ಲವೇ.. ?? Ashoka BA ji

    ReplyDelete
  19. ಧನ್ಯವಾದಗಳು Mamatha Keelar ಮೇಡಂ

    ReplyDelete
  20. ಎಲ್ಲವೂ ದೈವ ಲೀಲೆ. ಏನು ಮಾಡೋದು Nataraju Seegekote Mariyappa

    ReplyDelete
  21. ಧನ್ಯವಾದಗಳು Banavasi Somashekhar

    ReplyDelete
  22. ನವಮಾಸಗಳಲಿ
    ನಿನ್ನನು ನೆನೆನೆನೆದು
    ಖುಷಿಪಡುತ್ತಿದ್ದ ಸಮಯ,
    ಸ್ವರ್ಗದ
    ಬಾಗಿಲು ತೆರೆದಂತಿತ್ತು
    ಈ ಭುವಿಗೆ ನಿನ್ನ
    ನಾ ಕರೆತಂದ ಸಮಯ.

    ಮನ ಮುಟ್ಟುವಾ ಭಾವನೆ ಗೆಳೆಯ !!!
    ಚೆನ್ನಾಗಿದೆ ಕವಿತೆ ~!

    ReplyDelete
  23. ಸೂಪರಾಗಿದೆ....

    ReplyDelete
  24. ಧನ್ಯವಾದಗಳು Govindaraju Mysore & Prakash Srinivas

    ReplyDelete
  25. ಪರರ ಮನವ ಹೊಕ್ಕು
    ಅವರ ನೋವು
    ತನ್ನದೆಂಬುವಂತೆ
    ಕನಲಿ, ಕಣ್ಣೀರಿಟ್ಟು
    ಭಾವಗಳ ಬರೆದು
    ನಮ್ಮ ಕಣ್ಣಲ್ಲೂ
    ನೀರಹನಿ ಜಿನುಗುಂತೆ
    ಮಾಡಿದ , ರಾಘಣ್ಣ
    ನಿನಗೆ ನಮೋ ನಮಃ

    ಒಂದೇ ದಿನ ಎಲ್ಲವನ್ನೂ ಮುಗಿಸಿಬಿಡ ಬೇಡ ಮರಿ, ನಾಳೆಗೂ ಒಂದಿಷ್ಟು ಉಳಿಸು

    ReplyDelete
  26. ಹ್ಹ ಹ್ಹ ಹ್ಹಾ ಹಾಗೇನಿಲ್ಲ. ಒಂದೇ ದಿನ ಎಲ್ಲ ಮುಗಿಸಿದರೆ ಹೇಗೆ ಅಲ್ಲವೇ.. ಆಗಾಗ ಮುಂದುವರೆಸೋದು. Tirumalai Ravi sir..

    ReplyDelete
  27. bhagirathi chandrashekarJanuary 3, 2012 at 2:05 AM

    ನಿಮ್ಮ ಸಾಲುಗಳ ಅರ್ಥಪೂರ್ಣವಾಗಿದೆ...
    ಸಾಲುಗಳಲ್ಲಿನ ಆ ನಿಷ್ಕಲ್ಮಶ ಅನುರಾಗದ ಅನುಭೂತಿ ಮಧುರವಾಗಿ ಮೂಡಿಬಂದಿದೆ. ವಂದನೆಗಳು...

    ReplyDelete